ನವದೆಹಲಿ : ಪಾಕಿಸ್ತಾನದ ಗುಪ್ತಚರ ಸಂಸ್ಥೆ ಹಾಗೂ ತಾಲಿಬಾನ್ ಪರಸ್ಪರ ಸಹಕರಿಸುತ್ತಿವೆ ಎನ್ನುವ ಖಚಿತ ಮಾಹಿತಿಯ ನಂತರ ಪಾಕ್ ಪ್ರದೇಶದೊಳಗೆ ಅಮೆರಿಕ ಹೆಚ್ಚಿನ ದಾಳಿಗಳನ್ನು ನಡೆಸುತ್ತಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಶ್ವೇತಭವನದ ಮಾಧ್ಯಮ ಸಲಹೆಗಾರ ಡೇವಿಡ್ .ಇ. ಸೆಂಗೇರ್ ಅವರು ನೀಡಿದ ಖಚಿತ ಮಾಹಿತಿಯ ನಂತರ ಪಾಕಿಸ್ತಾನದ ಮೇಲೆ ಅಮೆರಿಕ ದಾಳಿಯಲ್ಲಿ ಹೆಚ್ಚಳ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅಮೆರಿಕದ ಆರೋಪಗಳನ್ನು ತಳ್ಳಿಹಾಕಿದ್ದು, ತಾವು ತಾಲಿಬಾನಿಗಳನ್ನು ಬೆಂಬಲಿಸಿಲ್ಲ. ಮಾಜಿ ಪ್ರದಾನಿ ಬೇನಜಿರ್ ಭುಟ್ಟೋ ಹತ್ಯೆಗೆ ತಮ್ಮ ಪ್ರಚೋದನೆಯಿರಲಿಲ್ಲ ಎಂದು ಹೇಳಿದ್ದಾರೆ. |