ಬಜೌರ್ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪಾಕ್ ಸೇನಾಪಡೆಗಳು 25 ಮಂದಿ ತಾಲಿಬಾನ್ ಉಗ್ರರನ್ನು ಹತ್ಯೆಗೈದಿವೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ
ತಾಲಿಬಾನ್ ಕಮಾಂಡರ್ ಸೇರಿದಂತೆ ತಾಲಿಬಾನ್‌ನ 25 ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಭಧ್ರತಾ ಅಧಿಕಾರಿಗಳು ಹೇಳಿದ್ದಾರೆ.
ತಾಲಿಬಾನ್ ಮತ್ತು ಅಲ್-ಕೈದಾ ಉಗ್ರರ ಶಂಕಿತ ಶಿಬಿರಗಳನ್ನು ಗುರಿಯಾಗಿಸಿಕೊಂಡು ಸೇನಾಪಡೆಗಳು ಆರ್ಟಿಲ್ಲರಿ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ದಾಳಿ ನಡೆಸಲಾಯಿತು ಎಂದು ಸೇನಾಮೂಲಗಳು ತಿಳಿಸಿವೆ.
ಕಳೆದ ಅಗಸ್ಟ್ ತಿಂಗಳಿನಿಂದ ಸೇನಾಪಡೆಗಳು ಪಾಕ್ ಗಡಿಭಾಗದಲ್ಲಿರುವ ತಾಲಿಬಾನ್ ಮತ್ತು ಅಲ್‌ಕೈದಾ ಉಗ್ರರ ಕಾರ್ಯಾಚರಣೆ ನಡೆಸುತ್ತಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. |