ಭಾರತೀಯ ಚಿತ್ರವೊಂದು ಆಸ್ಕರ್‍ಗೆ ಸ್ಪರ್ಧಿಸುವುದೇ ದುಸ್ತರ ಎಂಬಂತಿದ್ದ ಕಾಲಘಟ್ಟದಲ್ಲಿಯೂ ಸುಮಾರು 27 ವರ್ಷಗಳ ಬಳಿಕ 'ಸ್ಲಮ್‌ಡಾಗ್ ಮಿಲಿಯನೇರ್' ಅತ್ಯುತ್ತಮ ಸಂಗೀತ ಹಾಗೂ ಅತ್ಯುತ್ತಮ ಹಿನ್ನಲೆ ಸಂಗೀತಕ್ಕಾಗಿ ಎ.ಆರ್. ರೆಹಮಾನ್ ಸಹಿತ ಒಟ್ಟು ಎಂಟು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಕೋಟ್ಯಂತರ ಭಾರತೀಯರ ಮನಸ್ಸನ್ನು ಪುಳಕಿತಗೊಳಿಸಿದೆ.
ಸೋಮವಾರ ಲಾಸ್‌ಏಂಜಲೀಸ್‌ನಲ್ಲಿ ನಡೆದ 81ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಸ್ಲಮ್‌ಡಾಗ್ ಮಿಲಿಯನೇರ್ ನಾಮಕರಣಗೊಂಡಿದ್ದ ಹತ್ತು ವಿಭಾಗಗಳಲ್ಲಿ ಎಂಟು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವುದಾಗಿ ಘೋಷಿಸುತ್ತಿದ್ದಂತೆಯೇ ನೆರೆದಿದ್ದ ಜನಸ್ತೋಮ ಹರ್ಷೋದ್ಘಾರದೊಂದಿಗೆ ಹುಚ್ಚೆದ್ದು ಕುಣಿಯಿತು. ಈ ಚಿತ್ರಕ್ಕಾಗಿ ಭಾರತೀಯನೊಬ್ಬ ಪಡೆದ ಮೊದಲ ಪ್ರಶಸ್ತಿ ರೆಸೂಲ್ ಪೂಕುಟ್ಟಿಯವರಿಗೊಲಿಯಿತು. ಎರಡನೇ ಭಾರತೀಯ ಎ.ಆರ್. ರೆಹಮಾನ್.
'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಅತ್ಯುತ್ತಮ ಸಂಗೀತಕ್ಕಾಗಿ (ಒರಿಜಿನಲ್ ಸ್ಕೋರ್) ಎ.ಆರ್. ರೆಹಮಾನ್, "ಜೈ ಹೋ"ದ ಅತ್ಯುತ್ತಮ ಮ್ಯೂಸಿಕ್ ಸಾಂಗ್‌ಗಾಗಿ ಎ.ಆರ್. ರೆಹಮಾನ್ ಮತ್ತು ಸಾಹಿತ್ಯ ರಚನೆಕಾರ ಗುಲ್ಜಾರ್, ಅತ್ಯುತ್ತಮ ಚಿತ್ರಕಥೆಗಾಗಿ ಸೈಮನ್ ಬ್ಯೂಫಾಯ್, ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಅಂತೋಣಿ ಡಾಡ್ ಮಾಂಟಲ್, ಅತ್ಯುತ್ತಮ ಸೌಂಡ್ ಮಿಕ್ಸಿಂಗ್‌ಗಾಗಿ ರೆಸೂಲ್ ಪೂಕುಟ್ಟಿ, ಅತ್ಯುತ್ತಮ ನಿರ್ದೇಶನಕ್ಕಾಗಿ ಡಾನಿ ಬೋಯ್ಲೆ ಹಾಗೂ ಅತ್ಯುತ್ತಮ ಸಂಕಲನಕ್ಕಾಗಿ ಕ್ರಿಸ್ ಡಿಕೆನ್ಸ್ ಪಡೆದಿದ್ದಾರೆ.
ಸ್ಲಮ್‌ಡಾಗ್ ಮಿಲಿಯನೇರ್ ಪಡೆದುಕೊಂಡ ಪ್ರಶಸ್ತಿಗಳು:
- ಅತ್ಯುತ್ತಮ ಸಂಗೀತ: ಎ.ಆರ್. ರೆಹಮಾನ್
- ಅತ್ಯುತ್ತಮ ಮ್ಯೂಸಿಕ್ ಸಾಂಗ್: ಎ.ಆರ್. ರೆಹಮಾನ್ ಮತ್ತು ಗುಲ್ಜಾರ್
- ಅತ್ಯುತ್ತಮ ನಿರ್ದೇಶನ: ಡಾನಿ ಬೋಯ್ಲೆ
- ಅತ್ಯುತ್ತಮ ಸಂಕಲನಕಾರ: ಕ್ರಿಸ್ ಡೆಕೆನ್ಸ್
- ಅತ್ಯುತ್ತಮ ಸೌಂಡ್ ಮಿಕ್ಸಿಂಗ್: ರೆಸೂಲ್ ಪೂಕುಟ್ಟಿ
- ಅತ್ಯುತ್ತಮ ಛಾಯಾಗ್ರಹಣ: ಅಂತೋಣಿ ಡಾಡ್ ಮಾಂಟಲ್
- ಅತ್ಯುತ್ತಮ ಚಿತ್ರಕಥೆ ಹೊಂದಾಣಿಕೆ: ಸೈಮನ್ ಬ್ಯೂಫಾಯ್ - ----------------------------------------------------------------- ಇತರ ಚಿತ್ರಗಳು ಪಡೆದುಕೊಂಡ ಆಸ್ಕರ್ ಪ್ರಶಸ್ತಿ ಪಟ್ಟಿ
ಅತ್ಯುತ್ತಮ ನಾಯಕ ನಟ: ಸೀನ್ ಪೆನ್ (ಚಿತ್ರ: ಮಿಲ್ಕ್)
ಅತ್ಯುತ್ತಮ ನಾಯಕ ನಟಿ: ಕೇಟ್ ವಿನ್ಸ್‌ಲೆಟ್ (ಚಿತ್ರ: ದಿ ರೀಡರ್)
ಅತ್ಯುತ್ತಮ ಪೋಷಕ ನಟ: ಹೀತ್ ಲೆಡ್ಜರ್ (ಚಿತ್ರ: ದಿ ಡಾರ್ಕ್ ನೈಟ್)
ಅತ್ಯುತ್ತಮ ಪೋಷಕ ನಟಿ: ಪೆನೊಲಾಪ್ ಕ್ರೂಜ್ (ಚಿತ್ರ: ವಿಕಿ ಕ್ರಿಸ್ಟಿನಾ ಬಾರ್ಸಿಲೋನಾ)
ಅತ್ಯುತ್ತಮ ಮೇಕಪ್: ಗ್ರೆಗ್ ಕಾನಾಮ್ (ಚಿತ್ರ: ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್)
ಅತ್ಯುತ್ತಮ ವಸ್ತ್ರವಿನ್ಯಾಸ: ಮೈಕೆಲ್ ಓ ಕೊನ್ನಾರ್ (ಚಿತ್ರ: ದಿ ಡಚ್ಚೆಸ್ )
ಅತ್ಯುತ್ತಮ ಕಲಾ ನಿರ್ದೇಶನ: ಡೊನಾಲ್ಡ್ ಗ್ರಹಾಮ್ ಬರ್ಟ್ (ಚಿತ್ರ: ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್)
ಅತ್ಯುತ್ತಮ ಅನಿಮೇಷನ್ ಕಿರುಚಿತ್ರ: ಕುನಿಯೋ ಕಾಟೊ (ಚಿತ್ರ: ಲಾ ಮೈಸನ್ ಎನ್ ಪೆಟಿಟ್ಸ್ ಕ್ಯೂಬ್ಸ್)
ಅತ್ಯುತ್ತಮ ಅನಿಮೇಷನ್ ಕಥಾಚಿತ್ರ: ಆಂಡ್ರ್ಯೂ ಸ್ಟಾನ್ಟನ್ (ಚಿತ್ರ: ವಾಲ್-ಇ)
ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಸಬ್ಜೆಕ್ಟ್: ಮೇಗನ್ ಮಿಲನ್ (ಚಿತ್ರ: ಸ್ಮೈಲ್ ಪಿಂಕಿ)
ಬೆಸ್ಟ್ ಸೌಂಡ್ ಎಡಿಟಿಂಗ್: ರಿಚರ್ಡ್ ಕಿಂಗ್ (ಚಿತ್ರ: ದಿ ಡಾರ್ಕ್ ನೈಟ್)
ಬೆಸ್ಟ್ ವಿಶುವಲ್ ಎಫೆಕ್ಟ್ಸ್: ಎರಿಕ್ ಬಾರ್ಬಾ (ಚಿತ್ರ: ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್)
ಬೆಸ್ಟ್ ಡಾಕ್ಯುಮೆಂಟರಿ ಫೀಚರ್ ಫಿಲ್ಮ್: ಜೇಮ್ಸ್ ಮಾರ್ಷ್ (ಚಿತ್ರ: ಮ್ಯಾನ್ ಆನ್ ವೈರ್)
ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್: ಜೋಚೆನ್ ಅಲೆಕ್ಸಾಂಡರ್ (ಚಿತ್ರ: ಸ್ಪೈಲ್‌ಜೆಗ್ಲಾಂಡ್ ಟಾಯ್ಲೆಂಡ್)
ಬೆಸ್ಟ್ ಒರಿಜಿನಲ್ ಚಿತ್ರಕಥೆ: ಡಸ್ಟಿನ್ ಲಾನ್ಸ್ ಬ್ಲಾಕ್ (ಚಿತ್ರ: ಮಿಲ್ಕ್)
|