ಕೇವಲ 13 ವರ್ಷದ ಪ್ರಾಯದಲ್ಲೇ ತಂದೆಯೆನಿಸಿಕೊಂಡ ಆಲ್ಫೀ ಪ್ಯಾಟನ್ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ, ಇದೀಗ 15ರ ಪ್ರಾಯದ ಬ್ರಿಟನ್ ಶಾಲಾ ಬಾಲಕಿ ಅವಳಿ ಮಕ್ಕಳಿಗೆ ಜನ್ಮನೀಡಿದ್ದಾಳೆ. ಅವಳಿ ಮಕ್ಕಳ ತಂದೆ ಡೇನಿಯಲ್ ಸಾರ್ಜಂಟ್ 15 ವರ್ಷ ವಯಸ್ಸಿನವನಾಗಿದ್ದರೆ ಬಾಲಕಿ ಸಮಂತಾ ಗರ್ಭ ಧರಿಸಿದಾಗ 14 ವರ್ಷ ಪ್ರಾಯದವಳು.
13 ವರ್ಷದ ಪ್ರಾಯದಲ್ಲೇ ತಂದೆಯಾದ ಆಲ್ಭೀ ಪ್ಯಾಟನ್ ಪ್ರಕರಣದಿಂದ ಯುವಜನಾಂಗದಲ್ಲಿ ನೈತಿಕ ಅಧಃಪತನ ಕುಸಿಯುತ್ತಿರುವ ಸಂಗತಿ ವಿವಾದದ ಅಲೆ ಎಬ್ಬಿಸಿತು. ಕಳೆದ ಏಪ್ರಿಲ್‌ನಲ್ಲಿ ಸಮಂತಾ ಗರ್ಬಿಣಿ ಎಂದು ತಿಳಿದಾಗ ಇಬ್ಬರಿಗೂ ಆಘಾತವಾಯಿತೆಂದು ಡೇನಿಯಲ್ ಹೇಳಿದ್ದಾನೆ.
ಸ್ಕ್ಯಾನ್ ಬಳಿಕ ಅವಳಿ ಹೆಣ್ಣುಮಕ್ಕಳು ಎಂದು ಆಸ್ಪತ್ರೆಯಲ್ಲಿ ತಿಳಿಸಲಾಗಿತ್ತು. ಆದರೆ ಅವಳಿ ಗಂಡುಗಳಿಗೆ ಜನ್ಮನೀಡಿದಾಗ ಅದಕ್ಕಿಂತ ದೊಡ್ಡ ಆಘಾತ ತಮಗೆ ಉಂಟಾಯಿತೆಂದು ಡೇನಿಯಲ್ ಹೇಳಿದ್ದಾನೆ. ಸಮ್ಮಿ ಕೂಡ ತನ್ನ ಶಿಕ್ಷಣ ಮುಂದುವರಿಸಲು ನಿರ್ಧರಿಸಿದ್ದಾಳೆ.ಮಿಯೋಲ್ಸ್ ಕಾಪ್ ಹೈಸ್ಕೂಲು ವಿದ್ಯಾರ್ಥಿಗಳಾದ ದಂಪತಿ 13 ವರ್ಷದ ಪ್ರಾಯದಲ್ಲೇ ಪರಸ್ಪರ ಸಂಧಿಸುತ್ತಿದ್ದೆರೆಂದು ಹೇಳಲಾಗಿದೆ. |