ನಿಷೇಧಿತ ಗುಂಪಾದ ತೆಹ್ರೀಕ್-ಎ-ನಿಫಾಸ್ ಮೊಹಮದಿಯ ಮುಖ್ಯಸ್ಥ ಮೂಲಭೂತವಾದಿ ಧರ್ಮಗುರು ಸೂಫಿ ಮೊಹ್ಮದ್ ಜಿಯೊ, ಟಿವಿ ವರದಿಗಾರ ಮೂಸಾ ಖಾನ್ ಹತ್ಯೆಯಲ್ಲಿ ಕೈವಾಡ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾನೆ.
ಖಾನ್ ಅವರನ್ನು ಕಳೆದ ವಾರ ಸ್ವಾಟ್ ಕಣಿವೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಸ್ವಾಟ್‌ನಲ್ಲಿ ತಾಲಿಬಾನ್ ನಾಯಕ ಸೂಫಿ ಮೊಹ್ಮದ್ ಸ್ಥಳೀಯ ಹೀರೊ ಎನಿಸಿದ್ದಾನೆ.
ಈ ಪ್ರದೇಶದಲ್ಲಿ ಹಿಂದೊಮ್ಮೆ ಅತ್ಯಂತ ಅಪಾಯಕಾರಿ ತಾಲಿಬಾನ್ ನಾಯಕನೆನಿಸಿದ್ದ ಸೂಫಿ ಮೊಹ್ಮದ್ ಅಮೆರಿಕದ ಪಡೆಗಳ ವಿರುದ್ಧ ಹೋರಾಟಕ್ಕೆ 10,000 ಜನರ ಸೇನೆಯನ್ನು ಸಜ್ಜುಗೊಳಿಸಿದ್ದ. ಏತನ್ಮಧ್ಯೆ, ವರದಿಗಾರನ ಹತ್ಯೆಯು ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ಎಂದು ಪಾಕಿಸ್ತಾನ ಸರ್ಕಾರ ಪರಿಗಣಿಸಿದ್ದು, ಪೂರ್ಣ ತನಿಖೆ ನಡೆಸುವ ಭರವಸೆ ನೀಡಿದೆ.ಇದಕ್ಕೆ ಮುಂಚೆ, ನ್ಯಾಟೊ, ಬ್ರಿಟನ್, ಭಾರತ ಮತ್ತಿತರ ರಾಷ್ಟ್ರಗಳು ಸ್ವಾಟ್ ಕಣಿವೆಯಲ್ಲಿ ತಾಲಿಬಾನ್ ಜತೆ ಸರ್ಕಾರದ ಒಪ್ಪಂದಕ್ಕೆ ಕಳವಳ ವ್ಯಕ್ತಪಡಿಸಿ, ಇದು ಉಗ್ರಗಾಮಿಗಳಿಗೆ ಧೈರ್ಯತುಂಬಿ ಸುರಕ್ಷಿತ ಸ್ವರ್ಗವನ್ನು ಕಲ್ಪಿಸುತ್ತದೆ ಎಂದು ಹೇಳಿವೆ. |