ಫ್ರಾನ್ಸ್ ಪ್ರಧಾನಿ ನಿಕೋಲಸ್ ಸರ್ಕೋಜಿ ಹಾಗೂ ಇಟಲಿ ಪ್ರಧಾನಿ ಸಿಲ್ವಿವೋ ಬೆರ್ಲೂಸ್ಕೋನಿ ಅವರು ಮಂಗಳವಾರ ಅಣು ಒಪ್ಪಂದಕ್ಕೆ ಸಹಿ ಹಾಕಿದರು.
ರೋಮ್‌ನಲ್ಲಿ ಇಂದು ಇಬ್ಬರು ಪ್ರಧಾನಿಗಳು ನ್ಯೂಕ್ಲಿಯರ್ ಒಪ್ಪಂದ ಸಹಕಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ ಬಳಿಕ ಟಿವಿ ಚಾನೆಲ್‌ಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಎರಡು ದಶಕಗಳ ಹಿಂದೆ ನ್ಯೂಕ್ಲಿಯರ್ ಸ್ಥಾವರವನ್ನು ಮುಚ್ಚಲು ನಿರ್ಧರಿಸಿತ್ತು, ಆದರೆ ಇದೀಗ ಇಟಲಿಯನ್ ಪ್ರಧಾನಿ ಬೆರ್ಲೂಸ್ಕೋನಿ ನೇತೃತ್ವದ ಸರಕಾರ ಮತ್ತೆ ಪುನರಾಂಭಿಸಲು ಇಚ್ಚಿಸಿದ ಪರಿಣಾಮ ಈ ಒಪ್ಪಂದಕ್ಕೆ ಮುಂದಾಗಿತ್ತು.
ಇಟಲಿ ಮತ್ತೆ ನ್ಯೂಕ್ಲಿಯರ್ ಒಪ್ಪಂದ ಮಾಡಿಕೊಳ್ಳುವ ಮೂಲಕ ಮತ್ತಷ್ಟು ಅನುಕೂಲವಾಗಿದೆ ಎಂದು ಫ್ರಾನ್ಸ್ ಪ್ರಧಾನಿ ಸರ್ಕೋಜಿ ಟಿಜಿ 24 ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |