ಗಿನ್ನಿಸ್ ಬುಕ್‌ನಲ್ಲಿ ಹೆಸರು ಪಡೆಯಲು ಏನೆಲ್ಲಾ ಕಿತಾಪತಿ ಮಾಡಿದವರಿದ್ದಾರೆ. ಆದರೆ, ಇಲ್ಲೊಬ್ಬರು ಮಹಿಳೆ 23 ಬಾರಿ ಮದುವೆಯಾಗಿ ಗಿನ್ನಿಸ್ ಬುಕ್‌ನಲ್ಲಿ ತನ್ನ ಹೆಸರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ! ಈಕೆಗೀಗ 'ಅತಿ ಹೆಚ್ಚು ಬಾರಿ ಮದುವೆಯಾದ ವಿಶ್ವದ ಏಕೈಕ ಮಹಿಳೆ' ಎಂಬ ಬಿರುದಾಂಕಿತ!
68 ವರ್ಷ ವಯಸ್ಸಿನ ಲಿಂದಾ ವೂಲ್ಫೆ ಬದುಕು ಒಂದು ಇಂಟ್ರೆಸ್ಟಿಂಗ್ ಕಥಾನಕ. ಈವರೆಗೆ 23 ಬಾರಿ ಮದುವೆಯಾಗಿರುವ ಆಕೆ ಏಳು ಮಕ್ಕಳನ್ನೂ ಪಡೆದಿದ್ದಾರೆ. ತನ್ನ 16ನೇ ವಯಸ್ಸಿಗೆ ಮೊದಲ ಗಂಟು ಹಾಕಿಸಿಕೊಂಡ ಲಿಂದಾ ವೂಲ್ಫೆ ಬದುಕಿನಲ್ಲಿ ಈವರೆಗೆ ಸಂಗೀತಗಾರರು, ಕೈದಿ, ಕೊಳವೆ ರಿಪೇರಿ ಮಾಡುವವವ, ಧರ್ಮ ಬೋಧಕ, ಮೆಕ್ಯಾನಿಕ್ ಮತ್ತಿತರರು ಹಾದುಹೋಗಿದ್ದಾರೆ.
ವೂಲ್ಫೆ ಅತಿ ಹೆಚ್ಚು ವರ್ಷ ಒಬ್ಬನ ಜತೆ ವೈವಾಹಿಕ ಜೀವನ ನಡೆಸಿದ್ದು ಎಂದರೆ ಕೇವಲ ಏಳು ವರ್ಷ. ಅತಿ ಕಡಿಮೆ ಸಮಯ ಒಬ್ಬನ ಹೆಂಡತಿಯಾಗಿ ಇದ್ದುದು ಎಂದರೆ ಕೇವಲ 36 ಗಂಟೆಯಂತೆ!
ಆಕೆಯ ಜೀವನದಲ್ಲಿ ಬಂದ 23 ಗಂಡಂದಿರಲ್ಲಿ ಇಬ್ಬರು ಸಲಿಂಗಕಾಮಿಗಳಾಗಿದ್ದರೆ, ಇಬ್ಬರು ಆಕೆಗೆ ಮೋಸ ಮಾಡಿದ್ದರಿಂದ ನಾಲ್ವರ ಜತೆ ವೈವಾಹಿಕ ಜೀವನ ಮುರಿದು ಬಿತ್ತು. ಇದಲ್ಲದೆ, ಇನ್ನೂ ಹಲವು ಕಾರಣಗಳಿಂದ ಹಲವು ಗಂಡಂದಿರ ಜತೆಗಿನ ಸಂಬಂಧ ಕೆಟ್ಟಿತು. ಹೀಗಾಗಿ 23 ಬಾರಿ ಮದುವೆಯಾದ ಆಕೆ, ಇದೀಗ ಕಳೆದ 10 ವರ್ಷಗಳಿಂದ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರಂತೆ. ಆದರೆ `ರೊಮ್ಯಾನ್ಸ್ ಚಟ'ಕ್ಕೆ ತಾನು ಬಲಿಬಿದ್ದಿರುವುದನ್ನು ಸ್ವತಃ ಒಪ್ಪಿಕೊಳ್ಳುವ ಆಕೆ, ಇದೀಗ ಏಕಾಂಗಿ ಜೀವನದಿಂದ ಬೇಸರ ಬಂದು 24ನೇ ಗಂಡನಿಗಾಗಿ ಹುಡುಕಾಟ ಶುರುಮಾಡಿದ್ದಾರಂತೆ! |