ಇರಾನ್ ಮತ್ತು ರಷ್ಯಾದ ತಂತ್ರಜ್ಞರು ಇರಾನ್‌ನ ಪ್ರಥಮ ಪರಮಾಣು ಸ್ಥಾವರದ ಪರೀಕ್ಷಾರ್ಥ ಪ್ರಯೋಗ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಸ್ಥಾವರದ ಪೂರ್ಣ ಕಾರ್ಯಾಚರಣೆ ಆರಂಭಕ್ಕೆ ಪ್ರಮುಖ ಹೆಜ್ಜೆಯಾಗಿದೆ.
ಇದೇ ಸಂದರ್ಭದಲ್ಲಿ ಇರಾನ್ ತನ್ನ ವಿವಾದಾತ್ಮಕ ಪರಮಾಣು ಕಾರ್ಯಕ್ರಮದಲ್ಲಿ ಇನ್ನೊಂದು ಮುನ್ನಡೆ ಸಾಧಿಸಿದೆ. ಯುರೇನಿಯಂ ಸಂಸ್ಕರಣ ಘಟಕದಲ್ಲಿ ನಿರ್ವಹಿಸುವ ಸೆಂಟ್ರಿಫ್ಯೂಜ್‌ಗಳ ಸಂಖ್ಯೆಯನ್ನು 5000ದಿಂದ 6000ಕ್ಕೆ ಏರಿಸಿದೆ.
ಟೆಹರಾನ್ ತನ್ನ ಸಂಸ್ಕರಣೆ ಕಾರ್ಯಕ್ರಮವನ್ನು ಅಣ್ವಸ್ತ್ರ ಸಿಡಿತಲೆ ನಿರ್ಮಾಣಕ್ಕೆ ಬಳಸಬಹುದೆಂದು ಶಂಕಿಸಿರುವ ವಿಶ್ವಸಂಸ್ಥೆ ಅದನ್ನು ಸ್ಥಗಿತಗೊಳಿಸಬೇಕೆಂಬ ಒತ್ತಾಯದ ವಿರುದ್ಧ ಟೆಹರಾನ್ ಸೆಡ್ಡುಹೊಡಿದಿರುವುದು ಅವರ ಪ್ರಕಟಣೆಯಿಂದ ಸಾಬೀತಾಗಿದೆ. ತಾನು ಪರಮಾಣು ಬಾಂಬ್ ನಿರ್ಮಿಸುವುದನ್ನು ಇರಾನ್ ನಿರಾಕರಿಸುತ್ತಿದ್ದು, ತನ್ನ ಕಾರ್ಯಕ್ರಮ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿರುವುದಾಗಿ ತಿಳಿಸಿದೆ. ಬುಷೇರ್‌ನಲ್ಲಿ ಪರಮಾಣು ಸ್ಥಾವರ ನಿರ್ಮಾಣದ ಬಗ್ಗೆ ಅಮೆರಿಕ ಕೂಡ ಚಿಂತಿತವಾಗಿದ್ದು, ಸ್ಥಾವರದ ಖರ್ಚಾದ ಇಂಧನವನ್ನು ಮರುಸಂಸ್ಕರಿಸಿ ಪರಮಾಣು ಬಾಂಬ್ ನಿರ್ಮಾಣಕ್ಕೆ ಅಗತ್ಯವಾದ ಪ್ಲುಟೋನಿಯಂ ತಯಾರಿಸಬಹುದೆಂದು ಅಮೆರಿಕ ಶಂಕಿಸಿದೆ. ಸ್ಥಾವರ ನಿರ್ಮಾಣಕ್ಕೆ ರಷ್ಯಾ ಇರಾನ್‌ಗೆ ನೆರವು ನೀಡಿದ್ದು, ಸಂಸ್ಕರಿತ ಯುರೇನಿಯಂ ಇಂಧನ ಪೂರೈಸುತ್ತಿದೆ.
ಈ ನೆರವನ್ನು ನಿಲ್ಲಿಸುವಂತೆ ಮಾಸ್ಕೊಗೆ ಅಮೆರಿಕ ಒತ್ತಡ ಹೇರಿತ್ತು. ಆದರೆ ಬಳಸಿದ ಇಂಧನವನ್ನು ಪ್ಲುಟೋನಿಯಂಗೆ ಪರಿವರ್ತಿಸದಂತಾಗಲು ರಷ್ಯಾಗೆ ಕಳಿಸುವುದಾಗಿ ಇರಾನ್ ಒಪ್ಪಿಕೊಂಡ ಬಳಿಕ ಅಮೆರಿಕ ಮೃದುಧೋರಣೆ ತಾಳಿದೆ.
|