ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಅಲ್ ಖೈದಾ ಮತ್ತು ತಾಲಿಬಾನ್ ಉಗ್ರಗಾಮಿಗಳ ಉಪಟಳ ಹೆಚ್ಚುವುದನ್ನು ತಡೆಯುವ ಪ್ರಯತ್ನವಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಕಾಂಗ್ರೆಸ್‌ಲ್ಲಿ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಉಭಯ ರಾಷ್ಟ್ರಗಳಿಗೂ ಹೆಚ್ಚಿನ ಮಿಲಿಟರಿ ನೆರವು ನೀಡುವ ಪ್ರಸ್ತಾಪ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ಅಮೆರಿಕ ಮಿಲಿಟರಿ ನೆರವು ತೀವ್ರ ಚರ್ಚಾಸ್ಪದ ವಿಷಯವಾಗಿ ಉಳಿದಿದೆ. ಆದಾಗ್ಯೂ, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಇಸ್ಲಾಮಾಬಾದ್ ಯಶಸ್ಸಿಗೆ ತಳಕು ಹಾಕುವ ಮೂಲಕ ಮಿಲಿಟರಿಯೇತರ ನೆರವು ಹೆಚ್ಚಿಸಬೇಕೆಂದು ಸದಸ್ಯರು ಈ ಬಾರಿ ಒತ್ತಾಯಿಸುತ್ತಿದ್ದಾರೆ. ಬಜೆಟ್‌ನಲ್ಲಿ ಕೂಡ ಮಿಲಿಟರಿಯೇತರ ನೆರವು ಹೆಚ್ಚಿಸಬೇಕೆಂದು ಕೋರಲಾಗಿದೆ.
ಪೆಂಟಗಾನ್ ಪತ್ರಿಕಾಗೋಷ್ಠಿಯಲ್ಲಿ ಈ ಕ್ರಮದ ಬಗ್ಗೆ ಪ್ರಶ್ನಿಸಿದಾಗ, ಜಂಟಿ ಸಿಬ್ಬಂದಿ ಮುಖ್ಯಸ್ಥ ಅಡ್ಮೈರಲ್ ಮೈಕ್ ಮುಲ್ಲೆನ್, 'ನಾವು ಅವರಿಗೆ ಸಂಪನ್ಮೂಲ ಸಂಗ್ರಹಕ್ಕೆ ನೆರವಾಗುವುದು ಮತ್ತು ಪಾಕಿಸ್ತಾನದ ಜತೆ ಈ ಸಮಗ್ರ ಕಾರ್ಯತಂತ್ರವನ್ನು ಅನೇಕ ವರ್ಷಗಳವರೆಗೆ ಅಭಿವೃದ್ಧಿಪಡಿಸುವುದು ಅತ್ಯವಶ್ಯಕ' ಎಂದು ನುಡಿದರು.
ಪಾಕಿಸ್ತಾನಕ್ಕೆ ಮಿಲಿಟರಿಯೇತರ ನೆರವನ್ನು ಹೆಚ್ಚಿಸಲು ಸಹ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇರಾಕ್‌ನಿಂದ ಹಂತಹಂತವಾಗಿ ಪಡೆಗಳನ್ನು ಜವಾಬ್ದಾರಿಯುತವಾಗಿ ಹಿಂತೆಗೆದುಕೊಳ್ಳುವುದು ಮತ್ತು ಆಫ್ಘಾನಿಸ್ತಾನದಲ್ಲಿ ಅಮೆರಿಕದ ಉದ್ದೇಶಗಳ ಸಾಧನೆಗೆ ಸೂಕ್ತ ಸಂಪನ್ಮೂಲಗಳ ಕಡೆ ಗಮನಹರಿಸುವುದು ಬಾಹ್ಯ ಸವಾಲುಗಳಲ್ಲಿ ಸೇರಿದೆ.
|