ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ರನ್ನು ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಶುಕ್ರವಾರ ವಜಾ ಮಾಡಿದ್ದಾರೆ.
ಅಜ್ಮಲ್ ಅಮೀರ್ ಕಸಬ್‌ನನ್ನು ಹಸ್ತಾಂತರಿಸುವಂತೆ ಇಸ್ಲಾಮಾಬಾದ್ ಭಾರತಕ್ಕೆ ಔಪಚಾರಿಕ ಮನವಿ ಸಲ್ಲಿಸಿದೆಯೆಂದು ಹೇಳುವ ಮೂಲಕ ಸರ್ದಾರ್ ಮಹ್ಮದ್ ಗಾಜಿ ಅವರು ವಿವಾದದ ಕಿಡಿ ಸ್ಫೋಟಿಸಿದ್ದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಯಿಂದ ವಜಾ ಮಾಡಿದ್ದಲ್ಲದೇ ಉಪ ಅಟಾರ್ನಿ ಜನರಲ್ ಹುದ್ದೆಯಿಂದಲೂ ಸರ್ದಾರ್ ಮಹ್ಮದ್ ಗಾಜಿ ಅವರನ್ನು ಜರ್ದಾರಿ ವಜಾ ಮಾಡಿದ್ದಾರೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಗಾಜಿ ಫೆ.18ರಂದು ವಿವಾದಾತ್ಮಕ ಪ್ರತಿಕ್ರಿಯೆ ನೀಡಿದ ಸ್ವಲ್ಪ ಸಮಯದಲ್ಲೇ ಖಾಸಗಿ ಭೇಟಿಗಾಗಿ ಲಂಡನ್‌ಗೆ ತೆರಳಿದ್ದರು. ಕಸಬ್ ಪ್ರಮುಖ ಶಂಕಿತನಾಗಿದ್ದು, ಅವನನ್ನು ಭಾರತ ಹಸ್ತಾಂತರಿಸದಿದ್ದರೆ ಪಾಕ್‌ನಲ್ಲಿ ಬಂಧಿತನಾಗಿರುವ ಆರೋಪಿಗೆ ಶಿಕ್ಷೆ ವಿಧಿಸುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದರು. ಅವರ ಪ್ರತಿಕ್ರಿಯೆಯನ್ನು ವಿದೇಶಾಂಗ ಕಚೇರಿ ಕೆಲವು ಗಂಟೆಗಳ ಬಳಿಕ ನಿರಾಕರಿಸಿ, ಕಸಬ್ ಕಸ್ಟಡಿಗೆ ಯಾವುದೇ ಔಪಚಾರಿಕ ಮನವಿಯನ್ನು ಭಾರತಕ್ಕೆ ಸಲ್ಲಿಸಿಲ್ಲವೆಂದು ಹೇಳಿದೆ. |