ಪಾಕಿಸ್ತಾನಕ್ಕೆ ರವಾನಿಸುವ ನೆರವಿನ ಪ್ಯಾಕೇಜ್‌ನ ಸ್ವರೂಪ ಬದಲಿಸಿ, ಪ್ರಸಕ್ತ ಮಿಲಿಟರಿ ಕೇಂದ್ರಿತ ಪ್ಯಾಕೇಜ್ ಬದಲಿಗೆ ಮಿಲಿಟರಿಯೇತರ ಪ್ಯಾಕೇಜ್‌ಗೆ ಪರಿವರ್ತಿಸಲು ಗಮನಹರಿಸಲಾಗುವುದು ಎಂದು ಸೆನೆಟ್ ವಿದೇಶಾಂಗ ಸಮಿತಿಯ ಅಧ್ಯಕ್ಷರಾದ ಸೆನೆಟರ್ ಜಾನ್ ಕೆರಿ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ರವಾನಿಸುತ್ತಿರುವ ಆರ್ಥಿಕ ಪ್ಯಾಕೇಜ್‌ನಲ್ಲಿ ಪರಿವರ್ತನೆ ಮಾಡುವುದಾಗಿ ಜನಪ್ರಿಯ ನ್ಯಾಷನಲ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಕೆರಿ ಹೇಳಿದರು.
ಮುಂದಿನ ಕೆಲವು ವಾರಗಳಲ್ಲಿ ಅಮೆರಿಕ ಸೆನೆಟ್‌ನಲ್ಲಿ ಶಾಸನವೊಂದನ್ನು ಜಾರಿಗೆ ತರಲು ಕೆರಿ ಯೋಜಿಸಿದ್ದು, ಮುಂದಿನ ದಶಕದಲ್ಲಿ ಪಾಕಿಸ್ತಾನಕ್ಕೆ ಮಿಲಿಟರಿಯೇತರ ನೆರವು ಮೂರುಪಟ್ಟು ಹೆಚ್ಚಲಿದ್ದು, ಪ್ರತಿವರ್ಷ 1.5 ಬಿಲಿಯನ್ ಅಮೆರಿಕದ ಡಾಲರ್‌ಗೆ ಮುಟ್ಟಲಿದೆ.
ಆದಾಗ್ಯೂ, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ, ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ಮತ್ತು ಧಾರ್ಮಿಕ ಮೂಲಭೂತವಾದದ ವಿರುದ್ಧ ಹೋರಾಟದಲ್ಲಿ ಇಸ್ಲಾಮಾಬಾದ್ ಸಾಧಿಸಿರುವ ಯಶಸ್ಸಿನ ಆಧಾರದ ಮೇಲೆ ನೆರವಿನ ಪ್ರಮಾಣ ನಿರ್ಧರಿಸುವ ಮೂಲಕ ತಳಕುಹಾಕಲಾಗಿದೆ.
'ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ನಡೆಯುವ ವಿದ್ಯಮಾನಗಳಿಗೆ ಮಿಲಿಟರಿ ಪರಿಹಾರವಿಲ್ಲ ಎಂದು ಹೇಳಿದ ಅವರು, ನಿಜವಾದ ಪರಿಹಾರವು ಪಾಕಿಸ್ತಾನದ ಜನಜೀವನದ ಮಟ್ಟ ಸುಧಾರಣೆ ಮತ್ತು ಮಾರ್ಪಾಡಿನ ಮೂಲಕ ಸಿಗುತ್ತದೆಂದು' ಅವರು ಹೇಳಿದರು. |