ಕ್ಯೂಬಾದ ಜನಪ್ರಿಯ ಮಾಜಿ ನಾಯಕ ಫೀಡಲ್ ಕ್ಯಾಸ್ಟ್ರೊ ತೀವ್ರ ಕಾಯಿಲೆಯಿಂದ ನರಳುತ್ತಿದ್ದು ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರ ಕಣ್ಣಿಂದ ಮರೆಯಾಗಿದ್ದರು. ಆದರೆ ಶುಕ್ರವಾರ ಪವಾಡಸದೃಶ ಎನ್ನುವಂತೆ ಕ್ಯಾಸ್ಟ್ರೊ ಹವಾನದ ಬೀದಿಗಳಲ್ಲಿ ನಡೆದಾಡಿದಾಗ ಜನರು ಭಾವಪರವಶತೆಯಿಂದ ಅತ್ತರೆಂದು ವೆನೆಜುವೆಲಾ ಅಧ್ಯಕ್ಷ ಹ್ಯೂಗೊ ಚಾವೆಜ್ ಹೇಳಿದ್ದಾರೆ.
ದಂತಕತೆಯಾದ ಕ್ರಾಂತಿಕಾರಿ ಕ್ಯಾಸ್ಟ್ರೊ ಅವರ ನಿಕಟ ಸ್ನೇಹಿತರಾದ ಚಾವೆಜ್ ಕಳೆದ ವಾರಾಂತ್ಯ ಕ್ಯಾಸ್ಟ್ರೊ ಜತೆ ಹಲವಾರು ಗಂಟೆಗಳನ್ನು ಕಳೆದಿದ್ದು, ಕ್ಯಾಸ್ಟ್ರೊ ಆರೋಗ್ಯ ಸುಧಾರಿಸಿದೆಯೆಂದು ಹೇಳಿದ್ದಾರೆ. ತೋಟಕ್ಕೆ ಕ್ಯಾಸ್ಟ್ರೋ ನಡೆದುಕೊಂಡು ಹೋಗಿದ್ದು ಅವರ ಆರೋಗ್ಯ ಸುಧಾರಣೆಯಾಗಿದ್ದಕ್ಕೆ ಸಾಕ್ಷಿಯಾಗಿದೆ.
ಕ್ಯಾಸ್ಟ್ರೊ ಕಾಯಿಲೆ ಬಿದ್ದ ನಂತರದ ಛಾಯಾಚಿತ್ರಗಳಲ್ಲಿ ಅವರ ದುರ್ಬಲ ನೋಟ ಮತ್ತು ದಶಕಗಳಿಂದ ತಮ್ಮ ಬೆಂಕಿಯುಗುಳುವ ಭಾಷಣಗಳಿಂದ ಅಮೆರಿಕದ ಅಧ್ಯಕ್ಷರುಗಳನ್ನು ಖಂಡಿಸಿದ ದೃಢಕಾಯದ ನಾಯಕನ ನೋಟಕ್ಕೂ ವ್ಯತ್ಯಾಸವಿದೆ. ವೆನೆಜುವೆಲಾ ಹತ್ಯಾಕಾಂಡ ಸ್ಮರಣಾರ್ಥ ಗೌರವ ಸಲ್ಲಿಸುವ ಸಂದರ್ಭದಲ್ಲಿ ಫಿಡೆಲ್ ಹೊರಕ್ಕೆ ಹೋಗಿ ಹವಾನಾದ ಬೀದಿಗಳಲ್ಲಿ ನಡೆದಾಡುವ ಪವಾಡವನ್ನು ಜನರು ನೋಡಿ ಭಾವಪರವಶತೆಯಿಂದ ಕಣ್ಣೀರಧಾರೆ ಹರಿಸಿದೆರೆಂದು ಚಾವೆಜ್ ತಿಳಿಸಿದ್ದಾರೆ.
|