ಹತ್ತಾರು ಕೊಳೆತುಹೋಗುತ್ತಿರುವ ಶವಗಳನ್ನು ಸಾಮೂಹಿಕ ಗೋರಿಗಳಿಂದ ಅಗೆದು ಹೊರತೆಗೆಯಲಾಗಿದ್ದು, ಢಾಕಾ ಸೈನಿಕರ ದಂಗೆಯಲ್ಲಿ ಸತ್ತವರ ಸಂಖ್ಯೆ 66ಕ್ಕೇರಿದೆ. 'ನಾವು ಇನ್ನಷ್ಟು ದೇಹಗಳನ್ನು ಹೊರತೆಗೆಯುತ್ತಿದ್ದು, ನಿಖರ ಸಂಖ್ಯೆಯನ್ನು ತಿಳಿಸಲು ಸಾಧ್ಯವಾಗುತ್ತಿಲ್ಲ' ಎಂದು ಶೋಧ ತಂಡದ ಮುಂದಾಳತ್ವ ವಹಿಸಿರುವ ಬ್ರಿಗೇಡಿಯರ್ ಅಬು ನೈಮ್ ಶಾಹಿದುಲ್ಲಾ ತಿಳಿಸಿದರು.
ಕನಿಷ್ಠ 15 ಶವಗಳು ಕಾಣುತ್ತಿದ್ದು, ಅವುಗಳನ್ನು ಹೊರತೆಗೆಯಲು ವಿಶೇಷ ಉಪಕರಣ ಅಗತ್ಯವಾಗಿದೆ ಎಂದು ಅವರು ಹೇಳಿದರು. ಮೃತಪಟ್ಟಿರುವ ಎಲ್ಲ ದುರ್ದೈವಿಗಳು ಬಾಂಗ್ಲಾ ರೈಫಲ್ಸ್‌ನಲ್ಲಿ ಸೇವೆಸಲ್ಲಿಸುತ್ತಿದ್ದ ಅಧಿಕಾರಿಗಳಾಗಿದ್ದು, ಸೈನ್ಯದ ಉಡುಪು ಧರಿಸಿದ್ದರು ಎಂದು ಹೇಳಿದ್ದಾರೆ.
ನಾಪತ್ತೆಯಾದ ಸೇನಾಧಿಕಾರಿಗಳ ಕುಟುಂಬ ವರ್ಗ ತಮ್ಮ ಪ್ರೀತಿಪಾತ್ರರ ಬಗ್ಗೆ ಮಾಹಿತಿಗಾಗಿ ಯತ್ನಿಸುತ್ತಿದೆ. ಇದೊಂದು ಪೂರ್ವನಿಯೋಜಿತ ಹತ್ಯಾಕಾಂಡ ಎಂದು ಉದ್ಗರಿಸಿದ ಕರ್ನಲ್ ಸೈಯದ್ ಕಮ್ರುಜಾಮನ್, ಬಿಡಿಆರ್ ಮುಖ್ಯಸ್ಥರನ್ನು ತಮ್ಮ ಸಮ್ಮುಖದಲ್ಲೇ ಗುಂಡುಹಾರಿಸಿ ಕೊಲ್ಲಲಾಯಿತೆಂದು ಹೇಳಿದರು.
ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆಯೆಂದು ಆರೋಪಿಸಿದ್ದ ಸೈನಿಕರು, ಅಗ್ಗದ ರೇಷನ್, ಉನ್ನತ ವೇತನ ಮತ್ತು ಉತ್ತಮ ಉದ್ಯೋಗ ಸ್ಥಿತಿಗತಿಗೆ ಒತ್ತಾಯಿಸಿದರು.ಸೈನಿಕರು ನಮಗೆ ಬೈಗುಳ ಪ್ರಯೋಗ ಮಾಡುತ್ತಾ, ಅವರಿಗೆ ಬೇಕಾದವರಿಗೆಲ್ಲ ಗುಂಡು ಹಾರಿಸಿದರು. ತಮ್ಮ ಮೇಲೆ 7 ಬಾರಿ ಗುಂಡುಹಾರಿಸಿದರೂ ಸಜೀವವಾಗಿ ಉಳಿದಿದ್ದಾಗಿ ಅವರು ಸೈನಿಕರ ದಂಗೆಯ ಕರಾಳ ಕಥೆಯನ್ನು ಬಿಚ್ಚಿಟ್ಟರು. |