ಬಾಂಗ್ಲಾದೇಶದಲ್ಲಿ ಬಾರ್ಡರ್ ರೈಫಲ್ಸ್ ಸೈನಿಕರ ದಂಗೆಯ ಸಂದರ್ಭದಲ್ಲಿ ಸೇನಾಧಿಕಾರಿಗಳ ಹತ್ಯೆಗೆ ಕಾರಣರಾದ ಸೈನಿಕರಿಗೆ ಗರಿಷ್ಠ ಶಿಕ್ಷೆಯನ್ನು ವಿಧಿಸುವಂತೆ ಬಾಂಗ್ಲಾದೇಶ ಸೇನೆ ಒತ್ತಾಯಿಸಿದೆ.
ತನಿಖೆಯನ್ನು ಚುರುಕುಗೊಳಿಸಿ ಹತ್ಯಾಕಾಂಡಕ್ಕೆ ಕಾರಣಕರ್ತರಿಗೆ ಗರಿಷ್ಠ ಶಿಕ್ಷೆ ನೀಡುವುದರಿಂದ ತಮ್ಮ ಕೋಪ ಶಮನಗೊಳ್ಳುತ್ತದೆಂದು ಮಿಲಿಟರಿ ಗುಪ್ತಚರದಳ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಮಹಮ್ಮದ್ ಹುಸೇನ್ ಢಾಕಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು. |