ಸಿಂಗಾಪುರದ ಕಾರ್ಖಾನೆಯೊಂದರಲ್ಲಿ ನೈಟ್ರಿಕ್ ಆಸಿಡ್ ಮೈಮೇಲೆ ಚೆಲ್ಲಿದ್ದರಿಂದ ಮೃತಪಟ್ಟ ಮೂವರು ಭಾರತೀಯರ ಶವಗಳನ್ನು ದಕ್ಷಿಣ ಭಾರತದ ಅವರ ತವರುಜಿಲ್ಲೆಗಳಿಗೆ ಕಳಿಸಲಾಗುವುದು ಎಂದು ವರದಿಯೊಂದು ತಿಳಿಸಿದೆ.
ಶೇ.70ರಷ್ಟು ಸುಟ್ಟಗಾಯಗಳಾದ ಒಬ್ಬ ಭಾರತೀಯ ಮತ್ತು ಶೇ.4ರಷ್ಟು ಸುಟ್ಟಗಾಯಗಳಾದ ಇನ್ನೊಬ್ಬ ಭಾರತೀಯನಿಗೆ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಕೆಮಿಕ್ ಕೈಗಾರಿಕೆ ಸಂಸ್ಥೆಯಲ್ಲಿ ನಿರ್ವಹಣೆ ಕೆಲಸದಲ್ಲಿ ನಿರತರಾಗಿದ್ದ ಐವರು ಕಾರ್ಮಿಕರ ಮೇಲೆ ಶಾಖ ವಿನಿಮಯ ಘಟಕದ ಫ್ಲೇಂಜ್ ಜಾಯಿಂಟ್‌ನಿಂದ ಸಣ್ಣ ಪ್ರಮಾಣದ ನೈಟ್ರಿಕ್ ಆಸಿಡ್ ಚೆಲ್ಲಿತೆಂದು ಹೇಳಲಾಗಿದೆ.
ಅತ್ಯಂತ ಘಾತುಕ, ವಿಷಯುಕ್ತ ಆಸಿಡ್‌ನ್ನು ರಾಸಾಯನಿಕ ಮುಂತಾದ ಕೈಗಾರಿಕೆ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತಿದ್ದು, ಮೈಮೇಲೆ ತೀವ್ರ ಸುಟ್ಟಗಾಯಗಳನ್ನು ಉಂಟುಮಾಡುತ್ತದೆ. ಪೊಲೀಸರು ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಮಾನವಶಕ್ತಿ ಸಚಿವಾಲಯವು ಕೆಮಿಕ್ ಕೈಗಾರಿಕೆಯನ್ನು ಕಾರ್ಯಸ್ಥಗಿತಗೊಳಿಸಿದೆ. |