ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್‌ನಲ್ಲಿ ಶ್ರೀಲಂಕಾ ಆಟಗಾರರ ಮೇಲೆ ಗುಂಡು!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ನಲ್ಲಿ ಶ್ರೀಲಂಕಾ ಆಟಗಾರರ ಮೇಲೆ ಗುಂಡು!
ಸಂಗಕ್ಕಾರ, ಸಮರವೀರ ಗಾಯ, 5 ಪೋಲೀಸ್ ಸಾವು
ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯವಾಡಲು ಲಾಹೋರ್‌ನಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಮಂಗಳವಾರ ಬೆಳಿಗ್ಗೆ ಶೂಟಿಂಗ್ ನಡೆದ ಘಟನೆ ಉಪ ಖಂಡದಲ್ಲಿ ವಿಶ್ವಕಪ್ ಪಂದ್ಯವಳಿ ನಡೆಸುವ ನಿರ್ಧಾರದ ಮೇಲೆ ಬೆದರಿಕೆಯ ಕಾರ್ಮೋಡ ಕವಿದಿದೆ. ಉಗ್ರರು ನಡೆಸಿದ ಈ ಗುಂಡಿನ ದಾಳಿಗೆ ಆರು ಆಟಗಾರರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಶ್ರೀಲಂಕಾದ ಕ್ರೀಡಾಸಚಿವರು ದೃಢಪಡಿಸಿದ್ದಾರೆ.

ತಿಲನ್ ಸಮರವೀರಾ, ತರಂಗಾ ಪರನವಿಟಾನಾ, ತಿಲನ್ ತುಷಾರಾ, ಕುಮಾರ್ ಸಂಗಕ್ಕರಾ ಮತ್ತು ಅಜಂತಾ ಮೆಂಡಿಸ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. ತಂಡದ ನಾಯಕ ಮಹೇಲಾ ಜಯವರ್ದನೆ ಕೂಡ ಗಾಯಗೊಂಡಿದ್ದಾರೆಂದು ಜಿಯೋ ಟಿವಿ ವರದಿ ತಿಳಿಸಿದೆ.

ಏತನ್ಮಧ್ಯೆ ಪಾಕಿಸ್ತಾನದ ಪೊಲೀಸರು ದುಷ್ಕರ್ಮಿಗಳ ರೇಖಾಚಿತ್ರವನ್ನು ಬಿಡಿಸುತ್ತಿದ್ದು, ಅವರ ಬಳಿ ಸ್ವಯಂಚಾಲಿತ ಬಂದೂಕುಗಳು ಇದ್ದವೆಂದು ದೃಢಪಟ್ಟಿದೆ. ಗಢಾಫಿ ಸ್ಟೇಡಿಯಂ ಹೊರಗೆ ಈ ದಾಳಿ ನಡೆದಿದ್ದು, ಶ್ರೀಲಂಕಾ ಆಟಗಾರರ ಬೆಂಗಾವಲು ಪಡೆ ಮೇಲೆ ಎರಡು ಗ್ರೆನೇಡ್‌ಗಳನ್ನು ಎಸೆದ ಬಂದೂಕುಧಾರಿಗಳು ಬಳಿಕ ಎಡಬಿಡದೇ ಗುಂಡಿನ ಮಳೆ ಸುರಿಸಿದರೆಂದು ತಿಳಿದುಬಂದಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ತಕ್ಷಣದಿಂದ ಜಾರಿಗೆ ಬರುವಂತೆ ಪಾಕಿಸ್ತಾನ ಪ್ರವಾಸವನ್ನು ರದ್ದುಮಾಡಿದ್ದು, ಬಂದೂಕುಧಾರಿಗಳ ಜತೆ ಗುಂಡಿನ ಚಕಮಕಿ ಇನ್ನೂ ಮುಂದುವರಿದಿದೆಯೆಂದು ಹೇಳಲಾಗಿದೆ.

ಆರಂಭಿಕ ವರದಿಗಳ ಪ್ರಕಾರ, ಶ್ರೀಲಂಕಾ ತಂಡವು ಲಿಬರ್ಟಿ ಚೌಕ್‌ನಿಂದ ಪೊಲೊ ಮೈದಾನದ ರಸ್ತೆ ಕಡೆ ಗಡಾಫಿ ಸ್ಟೇಡಿಯಂನತ್ತ ಬಸ್ಸಿನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇದ್ದಕ್ಕಿದ್ದಂತೆ ಎರಡು ಗ್ರೆನೇಡ್‌ಗಳು ಬಸ್‌ನತ್ತ ತೂರಿಬಂತೆಂದು ಬಳಿಕ ಎಡಬಿಡದೇ ಗುಂಡಿನ ಸುರಿಮಳೆಯಾಯಿತೆಂದು ತಿಳಿದುಬಂದಿದೆ. ಈ ದುರ್ಘಟನೆಯಲ್ಲಿ ಐವರು ಪೊಲೀಸರು ಜೀವಕಳೆದುಕೊಂಡಿದ್ದು ಮ‌ೂವರಿಗೆ ಗಾಯಗಳಾಗಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇರಾನ್‌ ಬಳಿಯ ಅಣ್ವಸ್ತ್ರ ಮಾರಕವಾಗಲಿದೆ : ಅಮೆರಿಕ
ಇಂಡೋನೇಷ್ಯಾದಲ್ಲಿ ಭೂಕಂಪ
'ಮಾತಿನ ಮಲ್ಲ' ಚಾವೆಜ್‌‌‌ಗೆ ಬಾಯಿ ಮುಚ್ಚಲು ಸಲಹೆ
ಗಿನಿಯ ಅಧ್ಯಕ್ಷ ವಿಯೆರಾ ಸೈನಿಕರ ಗುಂಡಿಗೆ ಬಲಿ
ಅಮೆರಿಕದ ಕ್ಷಿಪಣಿ ದಾಳಿಗೆ ಪಾಕ್‌ನಲ್ಲಿ 7 ಜನರ ಸಾವು
ಒಸಾಮಾ ಬೇಟೆ ತುಂಬಾ ಕಷ್ಟ: ಅಮೆರಿಕ