ಪಾಕಿಸ್ತಾನದ ನೈರುತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ವಿಚಾರಸಂಕಿರಣವೊಂದರ ಮೇಲೆ ಸೋಮವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಐವರು ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಪಿಶಿನ್ ನಗರದ ಮದ್ರಸಾ ಒಳಗೆ ಆತ್ಮಾಹುತಿ ಬಾಂಬರ್ ಸ್ಫೋಟಕಗಳನ್ನು ಸಿಡಿಸಿದನೆಂದು ಪೊಲೀಸ್ ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬಾಂಬರ್ ಇನ್ನೂ ಪ್ರಾಪ್ತವಯಸ್ಕನೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆತ್ಮಾಹುತಿ ಬಾಂಬರ್‌ನ ಸಹಚರರಿಗಾಗಿ ಪೊಲೀಸರು ಆ ಪ್ರದೇಶವನ್ನು ಸುತ್ತುವರಿದು ಶೋಧ ಆರಂಭಿಸಿದ್ದಾರೆ.
ಜಮಾತ್ ಉಲೇಮಾ ಎ ಇಸ್ಲಾಮ್ ಪ್ರಾಂತೀಯ ಮುಖ್ಯಸ್ತ ಮೌಲಾನಾ ಮೊಹಮದ್ ಖಾನ್ ಶೆರಾನಿ ಅವರ ಮೇಲೆ ದಾಳಿ ನಡೆಸಲು ಯೋಜಿಸಲಾಗಿತ್ತೆಂದು ಅಧಿಕಾರಿಗಳು ನಂಬಿದ್ದಾರೆ. ದಾಳಿಗೆ ಕೆಲವೇ ನಿಮಿಷಗಳ ಮುನ್ನ, ಶೆರಾನಿ ಇತರೆ ಜೆಯುಐ ನಾಯಕರ ಜತೆ ಮದ್ರಸಾನಲ್ಲಿ ಸಮಾರಂಭವನ್ನು ಉದ್ದೇಶಿ ಮಾತನಾಡಿದ್ದರು.
ಸ್ಫೋಟ ಸಂಭವಿಸುವ ಮುಂಚೆಯೇ ಶೆರಾನಿ ಆ ಸ್ಥಳದಿಂದ ತೆರಳಿದ್ದರಿಂದ ಜೀವಸಹಿತ ಪಾರಾಗಿದ್ದಾರೆ. ಮುಂಚೆ ಕೂಡ ಶೆರಾನಿ ಹತ್ಯೆಯತ್ನಗಳಿಂದ ಪಾರಾಗಿದ್ದರು. |