ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಬುಧಬಿಯತ್ತ ಪ್ರಯಾಣ ಬೆಳೆಸಿದ ಶ್ರೀಲಂಕಾ ತಂಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಬುಧಬಿಯತ್ತ ಪ್ರಯಾಣ ಬೆಳೆಸಿದ ಶ್ರೀಲಂಕಾ ತಂಡ
ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ಮಾರಕ ದಾಳಿ ನಡೆದ ಹಿನ್ನೆಲೆಯಲ್ಲಿ ಲಾಹೋರ್‌ನ ಗಡಾಫಿ ಸ್ಟೇಡಿಯಂನಿಂದ ಪಾಕಿಸ್ತಾನದ ವಾಯುಪಡೆಯ ಹೆಲಿಕಾಪ್ಟರ್‌ ಶ್ರೀಲಂಕಾ ಆಟಗಾರರನ್ನು ಅಬುಧಬಿಗೆ ಕರೆದೊಯ್ಯಲಾಗಿದ್ದು, ಬುಧವಾರ ಶ್ರೀಲಂಕಾಕ್ಕೆ ವಾಪಸಾಗಲಿದ್ದಾರೆ ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಭದ್ರತಾ ಅಧಿಕಾರಿಗಳ ಕ್ಷಣೆಯಲ್ಲಿ ತಂಡದ 16 ಆಟಗಾರರು ಮೈದಾನದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಬಳಿಗೆ ಓಡಿದರು ಎಂದು ವರದಿಗಾರರು ತಿಳಿಸಿದ್ದಾರೆ. ಹೆಲಿಕಾಪ್ಟರ್ ಅವರನ್ನು ಲಾಹೋರ್ ವಿಮಾನನಿಲ್ದಾಣದಲ್ಲಿ ಬಿಟ್ಟ ಬಳಿಕ ಅಲ್ಲಿಂದ ಮಂಗಳವಾರ ಮಧ್ಯಾಹ್ನ ಅಥವಾ ನಾಳೆ ಸ್ವದೇಶಕ್ಕೆ ಹಿಂತಿರುಗುತ್ತಾರೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧಿಕಾರಿ ತಿಳಿಸಿದರು.

ಗುಂಡೇಟಿನಿಂದ ಗಾಯಗೊಂಡ ಇಬ್ಬರು ಶ್ರೀಲಂಕಾ ಆಟಗಾರರಾದ ತಿಲನ್ ಸಮರವೀರ ಮತ್ತು ತರಂಗ ಪರನವಿಟಾನಾ ಅವರನ್ನು ವಿಮಾನನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಆಟಗಾರರನ್ನು ಸಾಗಿಸಿದ ಗಡಾಫಿ ಸ್ಟೇಡಿಯಂ ಮೈದಾನದಲ್ಲಿ ಪಿಸಿಬಿ ಅಧ್ಯಕ್ಷ ಎಜಾಜ್ ಭಟ್ ಮತ್ತಿತರ ಮಂಡಳಿ ಅಧಿಕಾರಿಗಳು ಹಾಜರಿದ್ದರು.

ಆಟಗಾರರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅವರನ್ನು ಸ್ವದೇಶಕ್ಕೆ ಆದಷ್ಟು ಬೇಗ ವಾಪಸ್ ತರಲಾಗುವುದು ಎಂದು ಶ್ರೀಲಂಕಾ ಅಧ್ಯಕ್ಷ ಮಹೇಂದ್ರ ರಾಜಪಕ್ಷೆ ಸ್ಪಷ್ಟಪಡಿಸಿದ ಬಳಿಕ ಇಂತಹ ತುರ್ತು ಕ್ರಮವನ್ನು ಕೈಗೊಳ್ಳಲಾಗಿದೆ.

ಶ್ರೀಲಂಕಾ ತಂಡದ ಮೇಲೆ ಇಂತಹ ಹೇಡಿತನದ ದಾಳಿಯನ್ನು ತಾವು ಖಂಡಿಸುವುದಾಗಿ ರಾಜಪಕ್ಷೆ ಅಧಿಕೃತ ಭೇಟಿ ನೀಡಿರುವ ನೇಪಾಳದಿಂದ ತಿಳಿಸಿದ್ದಾರೆ.

ತಮ್ಮ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪಾಕಿಸ್ತಾನ ಉಗ್ರಗಾಮಿಗಳ ಕಾರಸ್ಥಾನವೆಂದು ತಿಳಿದಿದ್ದರೂ ಸದ್ಭಾವನೆಯ ರಾಯಭಾರಿಗಳಾಗಿ ಶ್ರೀಲಂಕಾ ಆಟಗಾರರು ಅಲ್ಲಿಗೆ ತೆರಳಿದರೆಂದು ಅವರು ನುಡಿದರು.

ಲಾಹೋರ್‌ನಲ್ಲಿ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಮತ್ತು ಸೇನಾಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನಚಕಮಕಿ ಇನ್ನೂ ನಡೆಯುತ್ತಿದೆಯೆಂಬ ವರದಿಗಳ ಹಿನ್ನೆಲೆಯಲ್ಲಿ ರಾಜಪಕ್ಷೆ ಕೈಗೊಂಡ ತಕ್ಷಣದ ಕ್ರಮಕ್ಕೆ ಪುಷ್ಠಿ ನೀಡಿದೆ.

ಸುಮಾರು 12 ಜನರಿದ್ದ ಭಯೋತ್ಪಾದಕರು, ಗುಂಡಿನಚಕಮಕಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಅವರನ್ನು ಪತ್ತೆ ಮಾಡುವ ಪ್ರಯತ್ನಗಳು ನಿಷ್ಫಲವಾಗಿವೆ. ಎರಡು ಕಾರ್‌ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು,ಪಾಕಿಸ್ತಾನದ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆವರಣದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಲಾಗಿದೆ.

ದಾಳಿಯಲ್ಲಿ ಪಾಕಿಸ್ತಾನ ಅಂಪೈರ್‌ಗೆ ಗಂಭೀರ ಗಾಯ:

ಪಾಕಿಸ್ತಾನ-ಶ್ರೀಲಂಕಾ ಸರಣಿಯಲ್ಲಿ ಮೀಸಲು ಅಂಪೈರ್ ಆಗಿದ್ದ ಮಾಜಿ ಟೆಸ್ಟ ಆಟಗಾರ ಅಹಸಾನ್ ರಾಜಾ ಶ್ರೀಲಂಕಾ ತಂಡದ ಮೇಲೆ ಶೂಟ್‍‌ಔಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ಟಿವಿ ವರದಿಗಳು ತಿಳಿಸಿವೆ. ಮಾಜಿ ಸ್ಪಿನ್ನರ್ ರಾಜಾ 9 ಟೆಸ್ಟ್ ಪಂದ್ಯಗಳನ್ನು ಮತ್ತು 49 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು ಮತ್ತು ಇತ್ತೀಚೆಗೆ ಅಂತಾರಾಷ್ಟ್ರೀಯ ಅಂಪೈರ್ ಆಗಿ ಪರಿವರ್ತನೆಯಾಗಿದ್ದರು.

ಶ್ರೀಲಂಕಾ ತಂಡದ ಬಸ್ ಜತೆ ಗಡಾಫಿ ಸ್ಟೇಡಿಯಂಗೆ ತೆರಳುತ್ತಿದ್ದ ಅಂಪೈರ್ ವ್ಯಾನ್‌ನಲ್ಲಿ ರಾಜಾ ತೆರಳುತ್ತಿದ್ದಾಗ ಬೆಂಗಾವಲು ವಾಹನಗಳು ಅಜ್ಞಾತ ಬಂದೂಕುಧಾರಿಗಳಿಂದ ಗುಂಡಿನ ದಾಳಿಗೆ ಗುರಿಯಾಗಿತ್ತು. ಟಿವಿ ವರದಿಗಳ ಪ್ರಕಾರ ರಾಜಾ ಅವರನ್ನು ಪ್ರಸಕ್ತ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಾಂಧಿ ವಸ್ತುಗಳ 'ಕೊಡುಗೆ' ನೀಡಲು ಒಟಿಸ್ ಷರತ್ತು
ಹಿಂಸೆ ತ್ಯಜಿಸಿದ ನಂತರ ಹಮಾಸ್ ಜತೆ ಮಾತುಕತೆ: ಹಿಲರಿ
ಪಾಕ್: ಆತ್ಮಾಹುತಿ ಬಾಂಬ್ ದಾಳಿಗೆ 5 ಸಾವು
ಪಾಕ್‌ನಲ್ಲಿ ಶ್ರೀಲಂಕಾ ಆಟಗಾರರ ಮೇಲೆ ಗುಂಡು!
ಇರಾನ್‌ ಬಳಿಯ ಅಣ್ವಸ್ತ್ರ ಮಾರಕವಾಗಲಿದೆ : ಅಮೆರಿಕ
ಇಂಡೋನೇಷ್ಯಾದಲ್ಲಿ ಭೂಕಂಪ