ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದಕರ ದಾಳಿಯಲ್ಲಿ ಭಾರತದ ಕೈವಾಡವನ್ನು ತಳ್ಳಿಹಾಕುವಂತಿಲ್ಲ ಎಂದು ಲಾಹೋರ್ ಕಮೀಷನರ್ ಖುಶರಾವ್ ಪರ್ವೇಜ್ ಮಂಗಳವಾರ ತಿಳಿಸುವ ಮೂಲಕ ತನ್ನ ಮೇಲಿನ ಕಳಂಕವನ್ನು ತೊಡೆದುಹಾಕಲು ಪಾಕಿಸ್ತಾನ ಯತ್ನಿಸಿದೆ.
ಭದ್ರತಾ ಅಧಿಕಾರಿಗಳು ಶ್ರೀಲಂಕಾ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ರಕ್ಷಿಸಿದೆಯೆಂದು ಪರ್ವೇಜ್ ಹೇಳಿದ್ದಾಗಿ ಜಿಯೊ ಟಿವಿ ವರದಿ ಮಾಡಿದೆ. ಭಾರತ ಪಾಕಿಸ್ತಾನವನ್ನು ದುರ್ಬಲಗೊಳಿಸಲು ಸದಾ ಯತ್ನಿಸುತ್ತಿದೆಯೆಂದು ಐಎಸ್‌ಐ ಮಾಜಿ ಮುಖ್ಯಸ್ಥ ಮತ್ತು ನಿವೃತ್ತ ಜನರಲ್ ಹಮೀದ್ ಗುಲ್ ದನಿಗೂಡಿಸಿದ್ದಾರೆ.
ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವಾಗಿ ಘೋಷಿಸಲು ಭಾರತ ಬಯಸಿದ್ದು, ಶ್ರೀಲಂಕಾ ತಂಡದ ಮೇಲೆ ದಾಳಿ ಈ ಪಿತೂರಿಗೆ ಸಂಬಂಧಿಸಿದೆ ಎಂದು ಅವರು ಜಿಯೊ ನ್ಯೂಸ್‌ಗೆ ತಿಳಿಸಿದರು. ಶ್ರೀಲಂಕಾ ಆಟಗಾರರ ಮೇಲೆ ದಾಳಿಯಲ್ಲಿ 6 ಪೊಲೀಸರು ಸತ್ತಿದ್ದಾರೆ ಮತ್ತು ಕೆಲವು ಶ್ರೀಲಂಕಾ ಆಟಗಾರರು ಗಾಯಗೊಂಡಿದ್ದಾರೆ.
ಈ ದಾಳಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ, ಪಾಕಿಸ್ತಾನದ ಭಯೋತ್ಪಾದನೆ ಸೌಲಭ್ಯಗಳನ್ನು ಪುಡಿಗಟ್ಟಬೇಕು ಮತ್ತು ಕಾರಣಕರ್ತರಿಗೆ ಶಿಕ್ಷೆ ವಿಧಿಸಬೇಕೆಂದು ಹೇಳಿದ್ದರು. |