ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಬೆಲ್‌ಫಾಸ್ಟ್‌ನ ಕ್ವೀನ್ಸ್ ವಿಶ್ವ ವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ. ಸಮಾಜದ ಸಮಸ್ಯಗಳಿಗೆ ವಿಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಬಹುದೆಂಬ ದೃಢ ಸಂಕಲ್ಪ ಕಲಾಂ ಅವರಿಗೆ ಇದೆ ಎಂದು ಬೆಲ್‌ಫಾಸ್ಟ್‌ನ ಕ್ವೀನ್ಸ್ ವಿ.ವಿ.ಯ ಹೇಳಿಕೆಯಲ್ಲಿ ತಿಳಿಸಲಾಗಿದೆ. |