ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಗಡಿಪ್ರದೇಶ ಅಲ್ ಖೈದಾಗೆ ಸುರಕ್ಷಿತ ಸ್ವರ್ಗ: ಒಬಾಮಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಗಡಿಪ್ರದೇಶ ಅಲ್ ಖೈದಾಗೆ ಸುರಕ್ಷಿತ ಸ್ವರ್ಗ: ಒಬಾಮಾ
ಪಾಕಿಸ್ತಾನದ ಗಡಿಪ್ರದೇಶಗಳು ಅಲ್ ಖಾಯಿದಾಗೆ ಸುರಕ್ಷಿತ ಸ್ವರ್ಗ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಅಮೆರಿಕಕ್ಕೆ ಭೇಟಿ ನೀಡಿರುವ ಬ್ರಿಟನ್ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ಜತೆ ಜಂಟಿ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮೇಲಿನ ವಿಷಯ ತಿಳಿಸಿದರು. ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಲಾಹೋರ್‌ನಲ್ಲಿ ನಡೆದ ದಾಳಿ ಬಗ್ಗೆ ಒಬಾಮಾ ತೀವ್ರ ಕಳವಳ ವ್ಯಕ್ತಪಡಿಸಿದರು.

'ಆಪ್ಘಾನಿಸ್ತಾನ ಮತ್ತು ಪಾಕಿಸ್ತಾನ ಭಯೋತ್ಪಾದನೆ ಚಟುವಟಿಕೆಗೆ ಸುರಕ್ಷಿತ ಸ್ವರ್ಗವಲ್ಲವೆಂದು ಖಾತರಿಗೆ ಬ್ರಿಟನ್ ಮತ್ತು ಅಮೆರಿಕ ತೀವ್ರ ಆಸಕ್ತಿತವಾಗಿವೆ. ಹಿಂದೆಯ‌ೂ ನಾವು ಸಂಘಟಿತರಾಗಿ ಪರಿಣಾಮಕಾರಿಯಾಗಿ ಭಯೋತ್ಪಾದನೆ ಎದುರಿಸಿದ್ದೇವೆ. ಆದರೆ ಆಪ್ಘಾನಿಸ್ತಾನದ ಸ್ಥಿತಿ ಹದಗೆಟ್ಟುಹೋಗಿದೆ' ಎಂದು ಒಬಾಮಾ ಹೇಳಿದರು.

ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕದ ನೀತಿಗಳ ಬಗ್ಗೆ ಸಮಗ್ರ ಪರಾಮರ್ಶೆ ಉಲ್ಲೇಖಿಸಿ ಮಾತನಾಡುತ್ತಾ, ನ್ಯಾಟೊ ಶೃಂಗಸಭೆಗೆ ಮುನ್ನ, ಕೆಲವು ಪ್ರಕಟಣೆಗಳನ್ನು ನೀಡುವುದಾಗಿ ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ವಿರುದ್ಧದ ಸೋಲು ನಮ್ಮ ಆಯ್ಕೆಯಲ್ಲ: ಜರ್ದಾರಿ
ತಾಯ್ನಾಡಿಗೆ ಮರಳಿದ ಶ್ರೀಲಂಕಾ ತಂಡ
ಕಲಾಂಗೆ ಕ್ವೀನ್ಸ್ ವಿ.ವಿಯ ಗೌರವ ಡಾಕ್ಟರೇಟ್
ಉಗ್ರರ ದಾಳಿ: ರಾಜಪಕ್ಷೆ ನೇಪಾಲ ಪ್ರವಾಸ ಮೊಟಕು
ಶತಾಯುಷಿಗಳ 'ಬಹುಮಾನ'ದ ಗಾತ್ರ ಕುಂಠಿತ
ದಾಳಿಯ ಹಿಂದೆ ಭಾರತದ ಕೈವಾಡ: ಪಾಕ್ ವರಸೆ