ಪರಮಾಣು ಬಿಕ್ಕಟ್ಟಿಗೆ ತೆರೆ ಎಳೆಯುವಂತೆ ವಿಶ್ವಸಂಸ್ಥೆ ಪರಮಾಣು ಕಾವಲು ಸಮಿತಿ ಇರಾನ್‌ಗೆ ಸೂಚಿಸಿದ್ದು, ಟೆಹ್ರಾನ್ ಸಹಕಾರದ ಕೊರತೆಯಲ್ಲಿ ಉಳಿದ ವಿಷಯಗಳ ಬಗ್ಗೆ ಮುನ್ನಡೆ ಸಾಧಿಸುವುದು ಕಷ್ಟ ಎಂದು ಹೇಳಿದೆ.
ಇರಾನ್ ಪರಮಾಣು ಕಾರ್ಯಕ್ರಮದ ಸಂಭವನೀಯ ಮಿಲಿಟರಿ ಆಯಾಮದ ಬಗ್ಗೆ ಆತಂಕ ಉದ್ಭವಿಸಿದೆ ಎಂದು ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗದ ಪ್ರಧಾನನಿರ್ದೇಶಕ ಮಹಮದ್ ಎಲ್ಬರಡೈ ತಿಳಿಸಿದರು.
'ಇರಾನ್ ಪಾರದರ್ಶಕ ಕ್ರಮಗಳು ಮತ್ತು ಹೆಚ್ಚುವರಿ ಶಿಷ್ಟಾಚಾರದ ಕ್ರಮಗಳನ್ನು ಕೈಗೊಳ್ಳದಿದ್ದರೆ, ಇರಾನ್‌ನಲ್ಲಿ ಅಘೋಷಿತ ಪರಮಾಣು ಸಾಮಗ್ರಿ ಮತ್ತು ಚಟುವಟಿಕೆಗಳ ಅನುಪಸ್ಥಿತಿಯ ಬಗ್ಗೆ ವಿಶ್ವಾಸಾರ್ಹ ಭರವಸೆ ನೀಡುವ ಸ್ಥಿತಿಯಲ್ಲಿ ಆಯೋಗ ಇರುವುದಿಲ್ಲ' ಎಂದು ಅವರು ಹೇಳಿದರು.
ತಮ್ಮ ಪರಮಾಣು ಕಾರ್ಯಕ್ರಮವು ವಿದ್ಯುತ್ ಕ್ಷೇತ್ರ ಅಭಿವೃದ್ಧಿ ಸೇರಿದಂತೆ ಶಾಂತಿಯುತ ಉದ್ದೇಶಕ್ಕೆ ಎಂದು ಇರಾನ್ ಹೇಳಿದ್ದರೂ, ಅವು ಅಣ್ವಸ್ತ್ರಗಳ ತಯಾರಿಕೆಯ ಗುರಿ ಹೊಂದಿವೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಆರೋಪಿಸಿವೆ. ಉತ್ತರಕೊರಿಯದಲ್ಲಿ ಯಾಂಗ್‌ಬ್ಯಾನ್ ಪರಮಾಣು ಸೌಲಭ್ಯಗಳ ಸ್ಥಗಿತದ ಸ್ಥಿತಿಗತಿ ಬಗ್ಗೆ ಆಯೋಗ ನಿಗಾ ವಹಿಸಿದೆ ಎಂದು ಎಲ್‌ಬರಾಡೈ ಹೇಳಿದರು. ಪ್ರಾಯೋಗಿಕ ಸ್ಥಾವರದಿಂದ ಹೊರಹೊಮ್ಮುವ ಇಂಧನ ರಾಡ್‌ಗಳು ಏಜನ್ಸಿಯ ಹತೋಟಿ ಮತ್ತು ಕಣ್ಗಾವಲಿನಲ್ಲಿದೆ ಎಂದು ಅವರು ನುಡಿದರು. |