ಮಹಾತ್ಮ ಗಾಂಧಿ ಖಾಸಗಿ ವಸ್ತುಗಳ ಹರಾಜನ್ನು ನಿಲ್ಲಿಸಲು ಅಮೆರಿಕದಲ್ಲಿ ಭಾರತದ ರಾಜತಾಂತ್ರಿಕರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಗುರುವಾರ ನಿಗದಿಯಂತೆ ಏಲಂ ನಡೆದರೆ ಗಾಂಧೀಜಿಯ ವಸ್ತುಗಳನ್ನು ಸ್ವತಃ ಖರೀದಿಸುವ ಬಗ್ಗೆ ಸಮುದಾಯ ನಾಯಕರು ಮತ್ತು ತಂಡಗಳು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಭಾರತದ ಕಾನ್ಸುಲೇಟ್‌ನ ರಾಜತಾಂತ್ರಿಕರ ಜತೆ ಉನ್ನತಮಟ್ಟದ ಸಭೆ ಬಳಿಕ, ಆಂಟಿಕೋರಂ ಹರಾಜುದಾರರು ಇಂದು ರಾತ್ರಿ ತಮ್ಮ ಅಂತಿಮ ನಿರ್ಧಾರವನ್ನು ಮುಟ್ಟಿಸುವ ಭರವಸೆ ನೀಡಿದ್ದಾರೆ.
ಭಾರತದ ಅಧಿಕಾರಿಗಳ ವ್ಯಾಪಕ ಪ್ರಯತ್ನಗಳ ನಡುವೆಯೂ, ಹರಾಜು ಮನೆ ಅಥವಾ ಗಾಂಧಿ ಖಾಸಗಿ ವಸ್ತುಗಳ ಮಾಲೀಕತ್ವ ಹೊಂದಿರುವ ಜೇಮ್ಸ್ ಒಟಿಸ್ ಹರಾಜು ಪ್ರಕ್ರಿಯೆ ನಿಲ್ಲಿಸುವ ಆಸಕ್ತಿ ತೋರಿಲ್ಲ. ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ಮೌಲ್ಯಯುತ ಗಾಂಧಿ ವಸ್ತುಗಳ ಹರಾಜಿಗೆ ನಿರ್ಬಂಧ ವಿಧಿಸಿದ ಬಳಿಕ ಗಾಂಧಿಯ ಖಾಸಗಿ ವಸ್ತುಗಳನ್ನು ಹರಾಜು ಮಾಡದಂತೆ ಅಮೆರಿಕ ವಿದೇಶಾಂಗ ಇಲಾಖೆ ಜತೆ ಪ್ರಸ್ತಾಪಿಸುವುದಾಗಿ ಪ್ರವಾಸೋದ್ಯಮ ಸಚಿವೆ ಅಂಬಿಕಾ ಸೋನಿ ಹೇಳಿದ್ದಾರೆ.
ಗಾಂಧೀಜಿಯ ಪಾಕೆಟ್ ಗಡಿಯಾರ, ಕನ್ನಡಕಗಳು, ಪ್ಲೇಟ್, ಜತೆ ಪಾದರಕ್ಷೆಗಳನ್ನು ಆಂಟಿಕೋರಂ ಹರಾಜುದಾರರು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. |