ಪಾಕಿಸ್ತಾನದ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ತಾನು ದಾಳಿ ನಡೆಸಿಲ್ಲ ಎಂದು ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ) ಸ್ಪಷ್ಟನೆ ನೀಡಿದೆ.
ಲಾಹೋರ್‌ನಲ್ಲಿ ಶ್ರೀಲಂಕಾ ಕ್ರೆಕೆಟಿಗರ ಮೇಲೆ ನಡೆದಿರುವ ಭಯೋತ್ಪಾದನೆ ದಾಳಿಯ ಹಿಂದೆ ತನ್ನ ಕೈವಾಡ ಇಲ್ಲ ಎಂದು ಎಲ್‌ಟಿಟಿಇ ವಕ್ತಾರ ದೀಲಿಪನ್ ಆಸ್ಟ್ರೇಲಿಯಾದ ಸ್ಪೆಶಲ್ ಬ್ರಾಡ್‌ಕಾಸ್ಟಿಂಗ್ ರೇಡಿಯೋಕ್ಕೆ ಬುಧವಾರ ರಾತ್ರಿ ತಿಳಿಸಿರುವುದಾಗಿ ಹೇಳಿದೆ.
ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದಿರುವ ಭಯೋತ್ಪಾದನೆ ದಾಳಿಯ ಹಿಂದೆ ಎಲ್‌ಟಿಟಿಇ ಸಂಚು ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವುದಾಗಿ ರೇಡಿಯೋ ವರದಿ ತಿಳಿಸಿದ್ದು, ಆ ಆರೋಪ ಶುದ್ದ ಸುಳ್ಳು ಎಂದು ನಿರಾಕರಿಸಿದೆ.
ಕ್ರಿಕೆಟಿಗರ ಮೇಲೆ ನಡೆದಿರುವ ದಾಳಿಯನ್ನು ತಾನು ಕೂಡ ತೀವ್ರವಾಗಿ ಖಂಡಿಸುವುದಾಗಿ ದೀಲಿಪನ್ ವಿವರಿಸಿದ್ದು, ಈ ಕುರಿತು ತಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ತಾನು ಶ್ರೀಲಂಕಾದಲ್ಲಿ ನಡೆಸುತ್ತಿರುವ ಹೋರಾಟವನ್ನು ಕೈಬಿಡುವಂತೆ ರೆಡ್ ಕ್ರಾಸ್ ಆಗ್ರಹವನ್ನು ಎಲ್‌ಟಿಟಿಇ ಒಪ್ಪುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. |