ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್‌‌ನಲ್ಲಿ ಭದ್ರತೆ ಸಂಪೂರ್ಣ ವಿಫಲವಾಗಿದೆ: ಸೈಮನ್ ವಾಗ್ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌‌ನಲ್ಲಿ ಭದ್ರತೆ ಸಂಪೂರ್ಣ ವಿಫಲವಾಗಿದೆ: ಸೈಮನ್ ವಾಗ್ದಾಳಿ
ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಭಯೋತ್ಪಾದನಾ ದಾಳಿ ಪ್ರಕರಣ ಕುರಿತಂತೆ ಇದೀಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಪಾಕಿಸ್ತಾನದಲ್ಲಿ ಭದ್ರತೆ ಎನ್ನುವುದು ಸಂಪೂರ್ಣ ವಿಫಲವಾಗಿದೆ ಆಸ್ಟ್ರೇಲಿಯಾದ ಕ್ರಿಕೆಟ್ ಅಂಪಾಯರ್ ಸೈಮನ್ ತೌಫೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಒಟ್ಟಾರೆಯಾಗಿ ಭದ್ರತೆಯೇ ಇಲ್ಲದಂತಾಗಿದೆ, ಪಾಕ್ ಸಾಕಷ್ಟು ಭರವಸೆ ನೀಡಿದ ಬಳಿಕವೇ ಶ್ರೀಲಂಕಾ ತಂಡ ಅಲ್ಲಿಗೆ ತೆರಳಿತ್ತು, ಆದರೆ ಅಲ್ಲಿ ನಡೆದಿರುವ ಘಟನೆ ಆಘಾತ ಹುಟ್ಟಿಸುವಂತಹದ್ದು ಎಂದು ಮತ್ತೊಬ್ಬ ಆಸ್ಟ್ರೇಲಿಯದ ಅಂಪಾಯರ್ ಡೇವಿಸ್ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ದೂರಿದ್ದಾರೆ.

ತಂಡ ಹೋಗುತ್ತಿರುವಾಗಲೇ ಶಸ್ತ್ರ ಸಜ್ಜಿತ ಉಗ್ರರು ಏಕಾಏಕಿ ದಾಳಿ ನಡೆಸಿದರೆ ಯಾರು ಬಂದು ನಮ್ಮನ್ನು ರಕ್ಷಿಸಬೇಕು, ಅಂತಹ ಅಪಾಯಕರ ಪರಿಸ್ಥಿತಿಯಿಂದ ನಾವು ಹೊರಬರುವುದೇ ಒಂದು ಪವಾಡ ಎಂದು ಅವರು ತಿಳಿಸಿದ್ದಾರೆ.
ದಾಳಿ ಹಿಂದಿರುವ ಗನ್‌ಮ್ಯಾನ್‌ ಪತ್ತೆಗಾಗಿ ಪಾಕ್ ಪೋಲಿಸರು ವ್ಯಾಪಕ ಜಾಲ ಬೀಸಿದ್ದಾರೆ, ಮಂಗಳವಾರ ಗಢಾಫಿ ಮೈದಾನದತ್ತ ಬಸ್‌ ಆಗಮಿಸುತ್ತಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಏಕಾಏಕಿ ದಾಳಿ ನಡೆಯುವ ಮೂಲಕ ಆರು ಮಂದಿ ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದರು, ಇಬ್ಬರು ನಾಗರಿಕರು ಹಾಗೂ ಹಲವು ಕ್ರಿಕೆಟಿಗರು ಗಾಯಗೊಂಡಿದ್ದರು.

ಘಟನೆಯಿಂದ ಇಕ್ಕಟ್ಟಿಗೆ ಸಿಲುಕಿರುವ ಪಾಕ್ ಸರಕಾರ ದಾಳಿ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಏತನ್ಮಧ್ಯೆ ದಾಳಿಗೆ ಸಂಬಂಧಿಸಿದಂತೆ 24ಮಂದಿಯನ್ನು ಸೆರೆ ಹಿಡಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ದಾಳಿಯ ಹಿಂದೆ ತನ್ನ ಕೈವಾಡವಿಲ್ಲ: ಎಲ್‌ಟಿಟಿಇ
ದಾಳಿಕೋರರ ಜಾಲ ಪತ್ತೆ: ಪಾಕ್ ಮಾಧ್ಯಮಗಳು
ವಿಧ್ವಂಸಕ ಕೃತ್ಯ ಸಾಧ್ಯತೆ: ಹಸೀನಾ
ಪಾಕ್‌ ಜತೆ ಉತ್ತಮ ಸಂಬಂಧ : ಲಂಕಾ
ಗಾಂಧಿ ವಸ್ತು ಹರಾಜು ಪ್ರಕ್ರಿಯೆಗೆ ಚಾತ್ವಾಲ್ 'ಬಿಡ್'
ಪಾಕ್ ವಿರುದ್ಧ ಇಮ್ರಾನ್ ಖಾನ್ ಕಿಡಿ