ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹರಾಜಿನಲ್ಲಿ ಗಾಂಧಿ ರಕ್ತದ ಮಾದರಿ-ಬೂದಿ ಸೇರಿದೆ: ಒಟಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹರಾಜಿನಲ್ಲಿ ಗಾಂಧಿ ರಕ್ತದ ಮಾದರಿ-ಬೂದಿ ಸೇರಿದೆ: ಒಟಿಸ್
ಮಹಾತ್ಮ ಗಾಂಧಿ ಖಾಸಗಿ ವಸ್ತುಗಳ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೆ ಗಾಂಧಿ ಅವರ ಚಿತಾಭಸ್ಮ, ಹತ್ಯೆಯ ಸ್ಥಳದಲ್ಲಿನ ರಕ್ತದ ಮಾದರಿ ಕೂಡ ತನ್ನ ಬಳಿ ಇರುವುದಾಗಿ ಅಮೆರಿಕ ಮೂಲದ ಜೇಮ್ಸ್ ಒಟಿಸ್ ಇದೀಗ ಮೊದಲ ಬಾರಿ ಮಾಹಿತಿಯನ್ನು ಹೊರಗೆಡವಿದ್ದಾರೆ.

ಮಹಾತ್ಮಾ ಗಾಂಧೀಜಿಯ ಪಾಕೆಟ್ ಗಡಿಯಾರ, ಕನ್ನಡಕಗಳು, ಪ್ಲೇಟ್, ಜತೆ ಪಾದರಕ್ಷೆ ಗುರುವಾರ ಮಧ್ನಾಹ್ನ ನ್ಯೂಯಾರ್ಕ್‌ನ ಆಂಟಿಕೋರಂನಲ್ಲಿ ಹರಾಜು ನಡೆಯಲಿದೆ. ಆದರೆ ಹರಾಜಿನಲ್ಲಿ ಗಾಂಧಿ ಅವರ ಬೂದಿ ಹಾಗೂ ರಕ್ತ ಕೂಡ ಸೇರಿರುವುದಾಗಿ ಒಟಿಸ್ ಘೋಷಿಸಿದ್ದಾರೆ.

ಗಾಂಧಿ ಅವರ ಖಾಸಗಿ ವಸ್ತುಗಳು ಇಂದು ಸುಮಾರು 20 ರಿಂದ 30ಸಾವಿರ ಅಮೆರಿಕನ್ ಡಾಲರ್‌ಗಳಿಗೆ ಹರಾಜು ಮಾಡಲಾಗುವುದೆಂದು ಆಂಟಿಕೋರಂ ದರ ನಿಗದಿಪಡಿಸಿದೆ. ಆದರೆ ಆ ಬೆಲೆ ಮತ್ತಷ್ಟು ಹೆಚ್ಚಳಗೊಳ್ಳುವ ಸಾಧ್ಯತೆ ಇರುವುದಾಗಿ ಖಚಿತಪಡಿಸದ ಮೂಲವೊಂದು ತಿಳಿಸಿದೆ.

ಮಹಾತ್ಮ ಗಾಂಧಿ ಖಾಸಗಿ ವಸ್ತುಗಳ ಹರಾಜನ್ನು ನಿಲ್ಲಿಸಲು ಅಮೆರಿಕದಲ್ಲಿ ಭಾರತದ ರಾಜತಾಂತ್ರಿಕರು ಇನ್ನಿಲ್ಲದ ಪ್ರಯತ್ನ ನಡೆಸಿದ್ದರೂ ಕೂಡ, ಗಾಂಧಿ ಅವರ ಖಾಸಗಿ ವಸ್ತುಗಳ ಹರಾಜನ್ನು ನಿಲ್ಲಿಸಬೇಕಿದ್ದರೆ ಭಾರತ ಬಡವರಿಗಾಗಿ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಹಣವನ್ನು ಮೀಸಲಿರಸಬೇಕೆಂದು ಷರತ್ತು ವಿಧಿಸಿದ್ದರು. ಆದರೆ ಈ ಷರತ್ತು ಒಪ್ಪಲು ಸಾಧ್ಯವಿಲ್ಲ ಎಂದು ವಿದೇಶಾಂಗ ರಾಜ್ಯ ಸಚಿವ ಆನಂದ್ ಶರ್ಮಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಭಾರತದ ಅಧಿಕಾರಿಗಳ ವ್ಯಾಪಕ ಪ್ರಯತ್ನಗಳ ನಡುವೆಯ‌ೂ, ಹರಾಜು ಮನೆ ಅಥವಾ ಗಾಂಧಿ ಖಾಸಗಿ ವಸ್ತುಗಳ ಮಾಲೀಕತ್ವ ಹೊಂದಿರುವ ಜೇಮ್ಸ್ ಒಟಿಸ್ ಹರಾಜು ಪ್ರಕ್ರಿಯೆ ನಿಲ್ಲಿಸುವ ಆಸಕ್ತಿ ತೋರಿಲ್ಲ. ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ಮೌಲ್ಯಯುತ ಗಾಂಧಿ ವಸ್ತುಗಳ ಹರಾಜಿಗೆ ನಿರ್ಬಂಧ ವಿಧಿಸಿದ ಬಳಿಕ ಗಾಂಧಿಯ ಖಾಸಗಿ ವಸ್ತಗಳನ್ನು ಹರಾಜು ಮಾಡದಂತೆ ಅಮೆರಿಕ ವಿದೇಶಾಂಗ ಇಲಾಖೆ ಜತೆ ಪ್ರಸ್ತಾಪಿಸುವುದಾಗಿ ಪ್ರವಾಸೋದ್ಯಮ ಸಚಿವೆ ಅಂಬಿಕಾ ಸೋನಿ ತಿಳಿಸಿದ್ದರು.

ಏತನ್ಮಧ್ಯೆ ಗಾಂಧಿ ಖಾಸಗಿ ವಸ್ತುಗಳ ಹರಾಜು ಪ್ರಕ್ರಿಯೆಯಲ್ಲಿ ತಾವು ಭಾಗವಹಿಸುವುದಾಗಿ ಭಾರತೀಯ ಮೂಲದ ಖ್ಯಾತ ಉದ್ಯಮಿ ಸಾಂತ್ ಸಿಂಗ್ ಚಾತ್ವಾಲ್ ಅವರು ಬುಧವಾರ ತಿಳಿಸಿದ್ದು, ತಾನು ಹಾಗೂ ಕೆಲವು ಭಾರತೀಯರು ಗಾಂಧಿ ವಸ್ತುಗಳನ್ನು ಹರಾಜಿನಲ್ಲಿ ಪಡೆದು ಅದನ್ನು ತಾಯ್ನಾಡಿಗೆ ಹಸ್ತಾಂತರಿಸುವುದಾಗಿ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಾಂಧಿ, ಒಟಿಸ್, ನ್ಯೂಯಾರ್ಕ್, ಅಮೆರಿಕ
ಮತ್ತಷ್ಟು
ಲಾಹೋರ್ ದಾಳಿ: ನಾಲ್ವರು ಶಂಕಿತ ಉಗ್ರರ ಸ್ಕೆಚ್ ಬಿಡುಗಡೆ
ಮತ್ತೆ ಮಿಲಿಟರಿ ಆಡಳಿತಕ್ಕೆ ಅವಕಾಶವಿಲ್ಲ: ಪಾಕಿಸ್ತಾನ
ಪಾಕ್‌‌ನಲ್ಲಿ ಭದ್ರತೆ ಸಂಪೂರ್ಣ ವಿಫಲವಾಗಿದೆ: ಸೈಮನ್ ವಾಗ್ದಾಳಿ
ಪಾಕ್ ದಾಳಿಯ ಹಿಂದೆ ತನ್ನ ಕೈವಾಡವಿಲ್ಲ: ಎಲ್‌ಟಿಟಿಇ
ದಾಳಿಕೋರರ ಜಾಲ ಪತ್ತೆ: ಪಾಕ್ ಮಾಧ್ಯಮಗಳು
ವಿಧ್ವಂಸಕ ಕೃತ್ಯ ಸಾಧ್ಯತೆ: ಹಸೀನಾ