ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ದಾಳಿ ಬಗ್ಗೆ ಪಾಕ್‌ಗೆ ಮೊದಲೇ ಮಾಹಿತಿ ಇತ್ತು !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿ ಬಗ್ಗೆ ಪಾಕ್‌ಗೆ ಮೊದಲೇ ಮಾಹಿತಿ ಇತ್ತು !
ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ನಡೆಯುವ ಸಂಭವ ಇರುವುದಾಗಿ ಜನವರಿ ತಿಂಗಳಿನಲ್ಲಿಯೇ ಲಾಹೋರ್ ಸ್ಥಳೀಯ ಭದ್ರತಾ ಏಜೆನ್ಸಿ ಮುನ್ಸೂಚನೆ ನೀಡಿದ್ದರೂ ಕೂಡ ಅದನ್ನು ಪಾಕ್ ಅಧಿಕಾರಿಗಳು ಕಡೆಗಣಿಸಿರುವುದಾಗಿ ಆರೋಪಿಸಿದೆ.

ಗುಪ್ತಚರ ಇಲಾಖೆಯ ಮಾಹಿತಿಯನ್ವಯ ಜನವರಿ 22ರಂದೇ ಶ್ರೀಲಂಕಾ ತಂಡದ ಮೇಲೆ ಜಿಹಾದಿಗಳ ದಾಳಿ ನಡೆಯುವ ಕುರಿತು ಪಾಕ್ ಭದ್ರತಾ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅಷ್ಟೇ ಅಲ್ಲ ಶ್ರೀಲಂಕಾ ತಂಡದವರ ಮೇಲೆ ಅವರು ಉಳಿದುಕೊಳ್ಳುವ ಹೋಟೆಲ್ ಅಥವಾ ಗಢಾಫಿ ಸ್ಟೇಡಿಯಂಗೆ ತೆರಳುವ ದಾರಿಯ ಮಧ್ಯೆದಲ್ಲಿಯೂ ದಾಳಿ ನಡೆಯಬಹುದಾಗಿದ ಎಂದು ಗುಪ್ತಚರ ಇಲಾಖೆ ನಿಖರವಾಗಿ ಮಾಹಿತಿ ನೀಡಿತ್ತು.

ಆದರೂ ಕೂಡ ಪಾಕಿಸ್ತಾನದ ಅಧಿಕಾರಿಗಳು ಸರಿಯಾದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸದೆ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಉಗ್ರರು ದಾಳಿ ನಡೆಸುವಂತಾಗಿತ್ತು ಎಂದು ಗುಪ್ತಚರ ಇಲಾಖೆ ಆರೋಪಿಸಿದೆ.

ಅಲ್ಲದೇ ಮುಂಬೈ ದಾಳಿಯ ಬಗ್ಗೆಯೂ ಸಮುದ್ರ ಮಾರ್ಗವೇ ಇಲ್ಲವೇ ವೈಮಾನಿಕ ದಾಳಿ ನಡೆಯುವ ಕುರಿತಾಗಿಯೂ ಭಾರತದ ಭದ್ರತಾ ಏಜೆನ್ಸಿಗಳು ಕೆಲವೊಂದು ಮಾಹಿತಿ ಕಲೆ ಹಾಕಿದ್ದವು. ಮುಂಬೈ ದಾಳಿ ನಡೆಯುವ ಎರಡು ತಿಂಗಳು ಮೊದಲೇ ಮಾಹಿತಿ ದೊರೆತಿತ್ತು. ಆದರೆ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ವಹಿಸಿದ ಪರಿಣಾಮ ಭಯೋತ್ಪಾದಕ ದಾಳಿಗೆ ಪ್ರತ್ಯಕ್ಷ ಸಾಕ್ಷಿಯಾಗುವಂತಾಯಿತು.

ಅದೇ ರೀತಿಯಾಗಿ 2008ರ ಜುಲೈ 8ರಂದು ಕಾಬೂಲ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೇಲೂ ದಾಳಿಯ ನಡೆಯುವ ಸಾಧ್ಯತೆ ಇರುವುದಾಗಿ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಆದರೆ ಗುಪ್ತಚರ ಇಲಾಖೆಯ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೆ ಇರುವಂತಹ ಸಂಪ್ರದಾಯವೇ ಬೆಳೆದು ಬಂದಿರುವುದರಿಂದ ಅಪಾಯದ ಅರಿವಿದ್ದೂ ಅಪಾಯಕ್ಕೊಳಗಾಗುವ ಪರಿಪಾಠ ಬೆಳೆಯುತ್ತಿದೆ ಎಂದು ಗುಪ್ತಚರ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹರಾಜಿನಲ್ಲಿ ಗಾಂಧಿ ರಕ್ತದ ಮಾದರಿ-ಬೂದಿ ಸೇರಿದೆ: ಒಟಿಸ್
ಲಾಹೋರ್ ದಾಳಿ: ನಾಲ್ವರು ಶಂಕಿತ ಉಗ್ರರ ಸ್ಕೆಚ್ ಬಿಡುಗಡೆ
ಮತ್ತೆ ಮಿಲಿಟರಿ ಆಡಳಿತಕ್ಕೆ ಅವಕಾಶವಿಲ್ಲ: ಪಾಕಿಸ್ತಾನ
ಪಾಕ್‌‌ನಲ್ಲಿ ಭದ್ರತೆ ಸಂಪೂರ್ಣ ವಿಫಲವಾಗಿದೆ: ಸೈಮನ್ ವಾಗ್ದಾಳಿ
ಪಾಕ್ ದಾಳಿಯ ಹಿಂದೆ ತನ್ನ ಕೈವಾಡವಿಲ್ಲ: ಎಲ್‌ಟಿಟಿಇ
ದಾಳಿಕೋರರ ಜಾಲ ಪತ್ತೆ: ಪಾಕ್ ಮಾಧ್ಯಮಗಳು