ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಾಂಧಿ ಖಾಸಗಿ ವಸ್ತು ಹರಾಜು ರದ್ದು ಮಾತುಕತೆ ವಿಫಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಂಧಿ ಖಾಸಗಿ ವಸ್ತು ಹರಾಜು ರದ್ದು ಮಾತುಕತೆ ವಿಫಲ
ಮಹಾತ್ಮ ಗಾಂಧಿ ಅವರ ಖಾಸಗಿ ವಸ್ತುಗಳ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಲು ಜೇಮ್ಸ್ ಒಟಿಸ್ ವಿಧಿಸಿದ್ದ ಷರತ್ತನ್ನು ಕೊನೆಯ ಕ್ಷಣದಲ್ಲಿ ಭಾರತ ನಿರಾಕರಿಸಿದ ಪರಿಣಾಮ ಹರಾಜು ಪ್ರಕ್ರಿಯೆ ರದ್ದು ಒಪ್ಪಂದ ಮುರಿದು ಬಿದ್ದಿದೆ.

ತುಂಬಾ ವಿವಾದಕ್ಕೀಡಾಗಿದ್ದ ಮಹಾತ್ಮ ಗಾಂಧಿ ಖಾಸಗಿ ವಸ್ತುಗಳ ಹರಾಜು ಪ್ರಕ್ರಿಯೆಗೆ ತಡೆಯುವಂತೆ ಭಾರತ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದರೂ ಕೂಡ, ಒಟಿಸ್ ಒಡ್ಡಿದ ಷರತ್ತನ್ನು ಭಾರತ ಒಪ್ಪಲು ನಿರಾಕರಣೆ ಸೂಚಿಸುವ ಮೂಲಕ ಹರಾಜು ತಡೆ ಮಾತುಕತೆ ವಿಫಲಗೊಂಡಿದೆ, ಆದರೆ ಭಾರತ ಸರಕಾರ ಅಧಿಕೃತವಾಗಿ ಕಾನೂನು ಸಮ್ಮತ ನೆಲೆಯಲ್ಲಿ ಷರತ್ತನ್ನು ಒಪ್ಪಿಕೊಳ್ಳುವುದಾದರೆ ಹರಾಜು ಪ್ರಕ್ರಿಯೆ ರದ್ದು ಮಾಡುವುದಾಗಿ ತಿಳಿಸಿದ್ದಾರೆ.


ಮಹಾತ್ಮಾ ಗಾಂಧೀಜಿಯ ಪಾಕೆಟ್ ಗಡಿಯಾರ, ಕನ್ನಡಕಗಳು, ಪ್ಲೇಟ್, ಜತೆ ಪಾದರಕ್ಷೆ ಗುರುವಾರ ಮಧ್ನಾಹ್ನ ನ್ಯೂಯಾರ್ಕ್‌ನ ಆಂಟಿಕೋರಂನಲ್ಲಿ ಗುರುವಾರ ಮಧ್ನಾಹ್ನ ಹರಾಜು ನಡೆಸುವುದಾಗಿ ಈ ಮೊದಲು ಘೋಷಿಸಿತ್ತು, ಅಲ್ಲದೇ ಹರಾಜಿನಲ್ಲಿ ಗಾಂಧಿ ಅವರ ಬೂದಿ ಹಾಗೂ ರಕ್ತದ ಮಾದರಿ ಕೂಡ ಸೇರಿರುವುದಾಗಿ ಒಟಿಸ್ ತಿಳಿಸಿದ್ದರು.

ಆದರೆ ಗಾಂಧಿ ಅವರ ಖಾಸಗಿ ವಸ್ತುಗಳ ಹರಾಜನ್ನು ತಡೆಯುವಂತೆ ಗಾಂಧಿ ಮೊಮ್ಮಗ ತುಷಾರ್ ಗಾಂಧಿ ಸೇರಿದಂತೆ ಹಲವಾರು ಭಾರತೀಯರು ಆಗ್ರಹಿಸಿದ್ದರು. ಕೊನೆಗೆ ಭಾರತ ಸರಕಾರ ಕೂಡ ಹರಾಜು ಪ್ರಕ್ರಿಯೆ ತಡೆಯುವಂತೆ ನ್ಯೂಯಾರ್ಕ್‌ಗೆ ಮನವಿ ಮಾಡಿಕೊಂಡಿತ್ತು. ಏತನ್ಮಧ್ಯೆ ಗಾಂಧಿ ಅವರ ಖಾಸಗಿ ವಸ್ತುಗಳನ್ನು ಭಾರತಕ್ಕೆ ತರುವಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಕೂಡ ಭರವಸೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಾಳಿ ಬಗ್ಗೆ ಪಾಕ್‌ಗೆ ಮೊದಲೇ ಮಾಹಿತಿ ಇತ್ತು !
ಹರಾಜಿನಲ್ಲಿ ಗಾಂಧಿ ರಕ್ತದ ಮಾದರಿ-ಬೂದಿ ಸೇರಿದೆ: ಒಟಿಸ್
ಲಾಹೋರ್ ದಾಳಿ: ನಾಲ್ವರು ಶಂಕಿತ ಉಗ್ರರ ಸ್ಕೆಚ್ ಬಿಡುಗಡೆ
ಮತ್ತೆ ಮಿಲಿಟರಿ ಆಡಳಿತಕ್ಕೆ ಅವಕಾಶವಿಲ್ಲ: ಪಾಕಿಸ್ತಾನ
ಪಾಕ್‌‌ನಲ್ಲಿ ಭದ್ರತೆ ಸಂಪೂರ್ಣ ವಿಫಲವಾಗಿದೆ: ಸೈಮನ್ ವಾಗ್ದಾಳಿ
ಪಾಕ್ ದಾಳಿಯ ಹಿಂದೆ ತನ್ನ ಕೈವಾಡವಿಲ್ಲ: ಎಲ್‌ಟಿಟಿಇ