'ಅಲ್ಲಾ' ಎಂಬ ಶಬ್ದ ಮುಸ್ಲಿಂ ಸಮುದಾಯದ ನಂಬಿಕೆಯದ್ದಾಗಿದೆ. ಅದನ್ನು ಮುಸ್ಲಿಮೇತರರು ಉಪಯೋಗಿಸುವುದು ಸರಿಯಲ್ಲ ಎಂದು ನಿವೃತ್ತ ಇಮಾಮ್ ತೈಬ್ ಅಜಾಮುದ್ದೀನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಅಲ್ಲಾ ಶಬ್ದ ಉಪಯೋಗಿಸಿದ ಸಮಾರು 10 ಮುಸ್ಲಿಮೇತರ ಪಬ್ಲಿಕೇಶನ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ 'ಅಲ್ಲಾ' ಶಬ್ದದ ಬಗ್ಗೆ ಸಾಕಷ್ಟು ಗೊಂದಲ ಏರ್ಪಡುತ್ತಿದೆ. ಆ ಶಬ್ದವನ್ನು ತಪ್ಪಾಗಿ ಅರ್ಥೈಸಿ, ತಪ್ಪು ಬಳಕೆ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಮುಸ್ಲಿಂ ಧಾರ್ಮಿಕ ಸಲಹೆಗಾರ ಅಬ್ದುಲ್ಲಾ ಮೊಹ್ಮದ್ ಜಿನ್ ತಿಳಿಸಿದ್ದಾರೆ.
ಬೇರೆ ಜಾತಿಯವರು ಅಲ್ಲಾ ಎಂಬ ಶಬ್ದವನ್ನು ಉಪಯೋಗಿಸುವುದಕ್ಕೆ ಇಸ್ಲಾಮ್‌ನಲ್ಲಿ ಬೇರೆ ಅರ್ಥ ನೀಡುತ್ತದೆ, ಆ ಕಾರಣಕ್ಕಾಗಿ ಮುಸ್ಲಿಮೇತರರು ಆ ಶಬ್ದ ಉಪಯೋಗಿಸುವುದು ಸರಿಯಲ್ಲ ಎಂದರು.
ಅಲ್ಲಾ ಎಂಬ ಶಬ್ದವನ್ನು ನ್ಯಾಯಾಂಗಬದ್ದವಾಗಿ ಪುನರ್ ಪರಿಶೀಲನೆಗೆ ಒಳಪಡಿಸಬೇಕೆಂದು ಕ್ಯಾಥೋಲಿಕ್ ಚರ್ಚ್ ಮನವಿಯೊಂದನ್ನು ಕೂಡ ಸಲ್ಲಿಸಿದೆ, ಆದರೆ ಆ ಮನವಿಯನ್ನು ತಿರಸ್ಕರಿಸಿದ ಮುಸ್ಲಿಂ ಮಂಡಳಿ, ಮುಸ್ಲಿಮೇತರರು ಅಲ್ಲಾ ಶಬ್ದವನ್ನು ಉಪಯೋಗಿಸುವಂತಿಲ್ಲ ಎಂದು ಕ್ಯಾಥೋಲಿಕ್ ವಾರಪತ್ರಿಕೆ ದಿ ಹೆರಾಲ್ಡ್ ವರದಿ ತಿಳಿಸಿದೆ. |