ಲಾಹೋರ್ ದಾಳಿಯ ಹಿಂದೆ ವಿದೇಶಿ ಕೈವಾಡ ಇರುವುದಾಗಿ ಆರೋಪಿಸುತ್ತಿದ್ದ ಪಾಕಿಸ್ತಾನ ಇದೀಗ ರಾಗ ಬದಲಿಸಿ, ದಾಳಿಯಲ್ಲಿ ಯಾವುದೇ ವಿದೇಶಿ ದೇಶಗಳ ಸಂಚು ಇಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಆಂತರಿಕ ಸಚಿವ ರೆಹಮಾನ್ ಮಲಿಕ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ದಾಳಿ ನಡೆದ ನಂತರ ಈ ಸಂಚಿನ ಹಿಂದೆ ಭಾರತದ ಕೈವಾಡ ಇದ್ದಿರುವುದನ್ನು ತಳ್ಳಿಹಾಕುವಂತಿಲ್ಲ ಎಂದು ಪಾಕ್‌ನ ಕೆಲ ಸಚಿವರು ಆರೋಪಿಸಿದ್ದರು. ಆದರೆ ಪಾಕ್ ಆರೋಪವನ್ನು ಶ್ರೀಲಂಕಾ ಕೂಡ ತೀವ್ರವಾಗಿ ಖಂಡಿಸಿತ್ತು.
ಆದರೆ ತನಿಖೆ ಪೂರ್ಣಪ್ರಮಾಣದಲ್ಲಿ ಅಂತ್ಯಗೊಳ್ಳುವವರೆಗೆ ನಾವು ನಿಖರವಾದ ಯಾವುದೇ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದಾಗಿಯೂ ಮಲಿಕ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಲಾಹೋರ್ ದಾಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಈವರೆಗಿನ ತನಿಖೆಯ ಮಾಹಿತಿ ಪ್ರಕಾರ ಯಾವುದೇ ವಿದೇಶಿ ಶಕ್ತಿಗಳ ನಂಟು ಇಲ್ಲ ಎಂಬುದು ತಿಳಿದು ಬಂದಿದೆ ಎಂದರು.
ನಾವು ಮಾಧ್ಯಮ, ನ್ಯಾಯಾಲಯ ಹಾಗೂ ಜನರ ಮಾಹಿತಿಯನ್ನು ಪರಿಗಣಿಸುವುದಾಗಿಯೂ ತಿಳಿಸಿದ ಅವರು, ತನಿಖಾ ವರದಿಯನ್ನು 24ಗಂಟೆಯೊಳಗೆ ಬಹಿರಂಗಪಡಿಸುವುದಾಗಿ ಭರವಸೆ ನೀಡಿದ್ದಾರೆ. |