ದೇಶದಲ್ಲಿರುವ ಎಲ್ಲಾ ಖಾಸಗಿ ಹಾಗೂ ಬೋರ್ಡಿಂಗ್ ಶಾಲೆಗಳನ್ನು ಮುಚ್ಚಬೇಕೆಂದು ಆಗ್ರಹಿಸಿ ನೇಪಾಳದ ಮಾವೋ ಪರ ಶಿಕ್ಷಕರ ಸಂಘಟನೆಯಾದ ಇನ್‌ಸ್ಟಿಟ್ಯೂಷನಲ್ ಸ್ಕೂಲ್ ಟೀಚರ್ಸ್ ಯೂನಿಯನ್ (ಐಎಸ್‌ಟಿಯು)ಬಂದ್‌ಗೆ ಕರೆ ನೀಡಿದೆ.
ಶಾಲೆಗಳನ್ನು ವಾಣಿಜ್ಯೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಈ ಸಂಘಟನೆಗಳು ದೇಶದಲ್ಲಿರುವ ಎಲ್ಲಾ ಖಾಸಗಿ ಶಾಲೆಗಳನ್ನು ಮುಚ್ಚಬೇಕೆಂದು ಆಗ್ರಹಿಸಿವೆ.
ಆದರೆ ಇದಕ್ಕೆ ತಿರುಗೇಟು ಎಂಬಂತೆ, ನೇಪಾಳದ ಪ್ರೈವೇಟ್ ಹಾಗೂ ಬೋರ್ಡಿಂಗ್ ಸ್ಕೂಲ್ ಅಸೋಸಿಯೇಶನ್ (ಪಿಎಬಿಎಸ್‌ಓಎನ್) ಕೂಡ ಸರಕಾರಕ್ಕೆ ಸಲ್ಲಿಸುವ ಶೈಕ್ಷಣಿಕ ತೆರಿಗೆಯನ್ನು ಪಾವತಿಸಬಾರದು ಎಂದು ಖಾಸಗಿ ಶಾಲೆಗಳಿಗೆ ಕರೆ ನೀಡಿದೆ.
ಆ ನಿಟ್ಟಿನಲ್ಲಿ ನಾವು ಯಾವುದೇ ಕಾರಣಕ್ಕೂ ಶೈಕ್ಷಣಿಕ ತೆರಿಗೆಯನ್ನು ಪಾವತಿಸುವುದಿಲ್ಲ, ಆಡಳಿತಾರೂಢ ಮಾವೋ ಸರಕಾರ ವಿಧಿಸುವ ನಿರ್ಬಂಧಗಳು ಮಾನವೀಯ ರಹಿತವಾದದ್ದು ಎಂದು ಪಿಎಬಿಎಸ್‌ಓಎನ್ ಅಧ್ಯಕ್ಷ ಭೋಜ್ ಬಹದ್ದೂರ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. |