ಇಲ್ಲಿ ನಡೆದ ಕಾರು ಅಫಘಾತದಲ್ಲಿ ಜಿಂಬಾಬ್ವೆ ಪ್ರಧಾನಮಂತ್ರಿ ಮಾರ್ಗನ್ ಸ್ವಾಂಗಿರೈ ಗಾಯಗೊಂಡಿದ್ದು, ಅವರ ಪತ್ನಿ ಸುಸಾನ್ ಸ್ವಾಂಗಿರೈ ಸ್ಥಳದಲ್ಲೇ ಅಸುನೀಗಿದ್ದಾರೆ.
ಪ್ರಧಾನಮಂತ್ರಿ ದಂಪತಿ ತಮ್ಮೂರಿನಲ್ಲಿ ನಡೆಯುವ ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳುತ್ತಿದ್ದರು. ಹರಾರೆ ನಗರದಿಂದ ಸುಮಾರು 300 ಕಿ.ಮೀ ಹೊರವಲಯದಲ್ಲಿ ಪ್ರಧಾನಮಂತ್ರಿಗಳಿದ್ದ ಕಾರಿಗೆ ಟ್ರಕ್ಕು ಡಿಕ್ಕಿ ಹೊಡೆದುದರಿಂದ ಅಫಘಾತ ಸಂಭವಿಸಿದೆ.
ಸಾಂಗಿರೈಸ್ ಮೂವ್ಮೆಂಟ್ ಫಾರ್ ಡೆಮಾಕ್ರಟಿಕ್ ಚೇಂಜ್ ಪಕ್ಷದ ವಕ್ತಾರ ನೆಲ್ಸನ್ ಚಾಮಿಸಾ ಹೇಳುವಂತೆ, ಪ್ರಧಾನಮಂತ್ರಿಗಳ ಪತ್ನಿ ಅಫಘಾತದ ಸ್ಥಳದಲ್ಲೇ ಅಸುನೀಗಿದರೆ, ಪ್ರಧಾನಮಂತ್ರಿಗಳಿಗೆ ಗಾಯಗಳಾಗಿವೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ದೃಢಪಡಿಸಿದ್ದಾರೆ. 56 ವರ್ಷದ ಮಾರ್ಗನ್ ಸ್ವಾಂಗಿರೈ ಮೂರು ವಾರಗಳ ಹಿಂದಷ್ಟೆ ಪ್ರಧಾನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. |