ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮಹಿಳೆಯರಿಗೆ ಪ್ರವೇಶ: ಸಮಾಧಿಗೆ ಬಾಂಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಿಳೆಯರಿಗೆ ಪ್ರವೇಶ: ಸಮಾಧಿಗೆ ಬಾಂಬ್
ವಾಯುವ್ಯ ಪಾಕಿಸ್ತಾನದಲ್ಲಿ ಗುರುವಾರ ನಡೆದ ಘಟನೆಯೊಂದರಲ್ಲಿ, ಮಹಿಳೆಯರಿಗೆ ಪ್ರವೇಶಾವಕಾಶ ನೀಡಿದ್ದಕ್ಕಾಗಿ 17ನೇ ಶತಮಾನದ ಸೂಫಿ ಸಂತನ ಸಮಾಧಿಯೊಂದಕ್ಕೆ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನ್ ಗಡಿಪ್ರದೇಶಕ್ಕೆ ತಾಗಿಕೊಂಡಿರುವ ಪಾಕಿಸ್ತಾನದ ವಾಯುವ್ಯ ಪೇಶಾವರದಲ್ಲಿರುವ ಪ್ರಖ್ಯಾತ ಪಾಸ್ಟ್ರೊ ಕವಿ ರೆಹಮಾನ್ ಬಾಬಾ ಎಂಬವರ ಸಮಾಧಿ ಸ್ಥಳಕ್ಕೆ ಬಾಂಬ್ ದಾಳಿಯನ್ನು ಸಂಘಟಿಸಲಾಗಿದೆ ಎಂದು ಹೇಳಲಾಗಿದೆ.

ಬಾಂಬ್ ದಾಳಿಯಿಂದಾಗಿ ಸಮಾಧಿಗೆ ಹಾನಿಯುಂಟಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಬಾಬಾ ಸಮಾಧಿಗೆ ಬಾಂಬ್ ದಾಳಿ ನಡೆದಿದೆ ಎಂಬ ವರದಿ ಹರಡುತ್ತಲೇ ನೂರಾರು ಮಂದಿ ಬಾಬಾರ ಬೆಂಬಲಿಗರು ಹಿಂಸಾಚಾರಕ್ಕೆ ತಿರುಗಿದ್ದಾರೆಂದು ವರದಿಯಾಗಿದೆ.

ಇಂತಹ ದಾಳಿಯಿಂದಾಗಿ ಉಗ್ರಗಾಮಿಗಳು ಸರಕಾರದ ಮೇಲೆ ಯಾವುದೇ ಒತ್ತಡ ಹೇರುವುದು ಮಾಡಲು ಸಾಧ್ಯವಾಗದು ಮತ್ತು ಸಮಾಧಿ ಸ್ಥಳವನ್ನು ಶೀಘ್ರದಲ್ಲಿಯೇ ಪುನರ್ ರಚಿಸಲಾಗುವುದು ಎಂದು ಪ್ರಾಂತೀಯ ಸಚಿವ ಬಶೀರ್ ಬಿಲೌರ್ ವರದಿಗಾರರಿಗೆ ತಿಳಿಸಿದ್ದಾರೆ.







ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಂಬಾಬ್ವೆ ಪ್ರಧಾನಮಂತ್ರಿ ಕಾರು ಅಫಘಾತ, ಪತ್ನಿ ಸಾವು
ಪೇಶಾವರದಲ್ಲಿ ಆತ್ಮಾಹುತಿ ದಾಳಿ: 7 ಸಾವು
ಸಾಹಸ ಮೆರೆದ ಬಸ್ ಚಾಲಕನಿಗೆ ಲಂಕಾ ಆಹ್ವಾನ
ಇಂಡೋನೇಷ್ಯಾ: ಜ್ವಾಲಾಮುಖಿ ಸ್ಫೋಟ
ನೇಪಾಳ: ಖಾಸಗಿ ಶಾಲೆ ಮುಚ್ಚಲು ಐಎಸ್‌ಟಿಯು ಆಗ್ರಹ
ದಾಳಿಯ ಹಿಂದೆ ವಿದೇಶದ ಕೈವಾಡ ಇಲ್ಲ: ಮಲಿಕ್ ಸ್ಪಷ್ಟನೆ