ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಾಪೂಜಿ ವಸ್ತುಗಳು: ಹರಾಜು ಕಮಿಷನ್ 1.53 ಕೋಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಪೂಜಿ ವಸ್ತುಗಳು: ಹರಾಜು ಕಮಿಷನ್ 1.53 ಕೋಟಿ
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಖಾಸಗಿ ವಸ್ತುವಾದ ದುಂಡು ಗಾಜಿನ ಕನ್ನಡಕಗಳು ಮತ್ತಿತರ ಖಾಸಗಿ ವಸ್ತುಗಳ ಹರಾಜಿನಿಂದಾಗಿ, ಬರೋಬ್ಬರಿ 296,000 ಡಾಲರ್(1.53 ಕೋಟಿ ರೂಪಾಯಿ) ಕಮಿಷನ್ ಲಭ್ಯವಾಗಿದೆ ಎಂದು ಆಂಟಿಕೋರಂ ಹರಾಜುದಾರರು ತಿಳಿಸಿದ್ದಾರೆ.

ಗಾಂಧೀಜಿಯವರ ವಸ್ತುಗಳು 18 ಲಕ್ಷ ಅಮೆರಿಕದ ಡಾಲರ್‌(9ಕೋಟಿ ರೂಪಾಯಿ)ಗೆ ಇಲ್ಲಿನ ಹರಾಜೊಂದರಲ್ಲಿ ಮಾರಾಟವಾಗಿದೆ. ಗಾಂಧಿಯವರ ಪಾಕೆಟ್ ಗಡಿಯಾರ, ಪಾದರಕ್ಷೆಗಳು, ಕನ್ನಡಕಗಳು, ಬೋಗುಣಿ ಮತ್ತು ತಟ್ಟೆ ಹರಾಜಿನ ಅತ್ಯಾಕರ್ಷಕ ವಸ್ತುಗಳಾಗಿದ್ದು, ಕಮೀಷನ್ ಸೇರಿದಂತೆ ಹರಾಜಿನಿಂದಾಗಿ ಒಟ್ಟು 2.096 ಅಮೆರಿಕ ಡಾಲರ್ ಬಾಚಿಕೊಂಡಿರುವುದಾಗಿ ಆಕ್ಷನ್ ಹೌಸ್ ಪ್ರಕಟಿಸಿದೆ.

ಭಾರತದ ಉದ್ಯಮಿ ವಿಜಯ ಮಲ್ಯ ಈ ವಸ್ತುಗಳನ್ನು ಖರೀದಿಸಿರುವ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ವಾಪಸಾಗುತ್ತಿರುವುದು ಸಂತೋಷ ನೀಡಿದೆ ಎಂಬುದಾಗಿ ಅದು ಹೇಳಿದೆ. ಬೋಗುಣಿ ಮತ್ತು ತಟ್ಟೆಯನ್ನು ಗಾಂಧಿ ತಮ್ಮ ಕಟ್ಟಕಡೆಯ ಬೋಜನಕ್ಕೆ ಬಳಸಿದ್ದರೆಂದು ಹೇಳಲಾಗಿದೆ.

ಭಾರತದ ಆಧ್ಯಾತ್ಮಿಕ ಮತ್ತು ರಾಜಕೀಯ ನಾಯಕ ಗಾಂಧೀಜಿಯ ಖಾಸಗಿ ವಸ್ತುಗಳ ಮಾರಾಟ ವಿಶ್ವಾದ್ಯಂತ ಕುತೂಹಲ ಕೆರಳಿಸಿತ್ತು ಮತ್ತು ಹರಾಜು ಪ್ರಕ್ರಿಯೆಯನ್ನು ಅಮ‌ೂಲ್ಯವಸ್ತು ಸಂಗ್ರಹಕಾರರು ಮತ್ತು ಬೆಂಬಲಿಗರು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆಂದು ಆಂಟಿಕೋರಂ ಹರಾಜುದಾರರ ಅಧ್ಯಕ್ಷ ರಾಬರ್ಟ್ ಮಾರನ್ ಕಳೆದ ರಾತ್ರಿ ಹೇಳಿಕೆ ನೀಡಿದ್ದಾರೆ.

ಗಾಂಧೀಜಿಯ ಖಾಸಗಿ ವಸ್ತುಗಳು ಭಾರತಕ್ಕೆ ವಾಪಸಾಗುತ್ತಿರುವುದರಿಂದ ತಮಗೆ ಸಂತೋಷವಾಗಿದ್ದು, ಅದು ಭಾರತ ಮಾತ್ರವಲ್ಲದೆ, ವಿಶ್ವಾದ್ಯಂತ ಜನತೆಯ ಆಶಯವಾಗಿತ್ತೆಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಹಿಳೆಯರಿಗೆ ಪ್ರವೇಶ: ಸಮಾಧಿಗೆ ಬಾಂಬ್
ಜಿಂಬಾಬ್ವೆ ಪ್ರಧಾನಮಂತ್ರಿ ಕಾರು ಅಫಘಾತ, ಪತ್ನಿ ಸಾವು
ಪೇಶಾವರದಲ್ಲಿ ಆತ್ಮಾಹುತಿ ದಾಳಿ: 7 ಸಾವು
ಸಾಹಸ ಮೆರೆದ ಬಸ್ ಚಾಲಕನಿಗೆ ಲಂಕಾ ಆಹ್ವಾನ
ಇಂಡೋನೇಷ್ಯಾ: ಜ್ವಾಲಾಮುಖಿ ಸ್ಫೋಟ
ನೇಪಾಳ: ಖಾಸಗಿ ಶಾಲೆ ಮುಚ್ಚಲು ಐಎಸ್‌ಟಿಯು ಆಗ್ರಹ