ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇನ್ನಷ್ಟು ಗಾಂಧಿವಸ್ತುಗಳಿವೆಯಂತೆ ಓಟಿಸ್ ಬಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನಷ್ಟು ಗಾಂಧಿವಸ್ತುಗಳಿವೆಯಂತೆ ಓಟಿಸ್ ಬಳಿ
ND
ಗಾಂಧೀಜಿಯವರ ಅಮ‌ೂಲ್ಯ ವಸ್ತುಗಳನ್ನು ಭಾರತದ ಮದ್ಯದ ದೊರೆ ವಿಜಯ್ ಮಲ್ಯ ಹರಾಜಿನಲ್ಲಿ 1.8 ಮಿಲಿಯ ಡಾಲರ್ ತೆತ್ತು ಖರೀದಿಸಿದ್ದರಿಂದ, ಇವುಗಳು ಮತ್ತೆ ತಾಯ್ನಾಡಿಗೆ ವಾಪಸಾದ ಸಂತೋಷದ ನಡುವೆ, ಮಹಾತ್ಮಾಗಾಂಧಿ ಅವರಇನ್ನೂ ಕೆಲವು ವಸ್ತುಗಳನ್ನು ಕೊಡುಗೆಯಾಗಿ ನೀಡುವುದಾಗಿ ಅಮೆರಿಕದ ಗಾಂಧೀ ವಸ್ತುಗಳ ಸಂಗ್ರಹಕಾರ ಜೇಮ್ಸ್ ಓಟಿಸ್ ತಿಳಿಸಿದ್ದಾರೆ.

ಆದರೆ ಬಡವರ ಆರೋಗ್ಯಸೇವೆ ವೆಚ್ಚಕ್ಕೆ ಗಣನೀಯ ಹೆಚ್ಚಳ ಮಾಡಬೇಕೆಂಬ ತಮ್ಮ ಪ್ರಸ್ತಾವನೆಗೆ ಸರ್ಕಾರ ಒಪ್ಪಿದರೆ ಮಾತ್ರ ಗಾಂಧೀಜಿ ವಸ್ತುಗಳನ್ನು ದಾನ ಮಾಡುವುದಾಗಿ ಅವರು ಷರತ್ತು ವಿಧಿಸಿದ್ದಾರೆ. ಬಡವರ ಅಭಿವೃದ್ಧಿಗೆ ಈ ವಸ್ತುಗಳನ್ನು ಹರಾಜು ಹಾಕಲು ತಾವು ನಿರ್ಧರಿಸಿರುವುದಾಗಿ ಓಟಿಸ್ ನ್ಯೂಯಾರ್ಕ್‌ನಿಂದ ದೂರವಾಣಿ ಸಂದರ್ಶನದಲ್ಲಿ ಹೇಳಿದ್ದಾರೆ.

ಹರಾಜಿನಲ್ಲಿ ಸುಮಾರು 1 ಮಿಲಿಯನ್ ಡಾಲರ್ ಗಳಿಸಲಿದ್ದು, ಪ್ರತಿಯೊಂದು ಪೆನ್ನಿಯನ್ನು ಭಾರತ ಸೇರಿದಂತೆ ದುರ್ಬಲ ವರ್ಗದ ಕಲ್ಯಾಣಕ್ಕಾಗಿ ಬಳಸುವುದಾಗಿ ಅವರು ನುಡಿದರು. ಹಸಿರು ಕ್ರೆಯಾನ್‌ನಲ್ಲಿ ಗಾಂಧೀ ಕೈಬರೆಹವಿರುವ, ಬಾಪು ಎಂದು ಅಂಕಿತ ಹಾಕಿರುವ 1934ರಲ್ಲಿ ಬರೆದ ಪತ್ರ ಮತ್ತು 21.01.48ರ ದಿನಾಂಕದ, ಅವರ ಹತ್ಯೆಗೆ ಕೇವಲ 9 ದಿನಗಳು ಮುಂಚಿನ ಐರ್ವಿನ್ ಆಸ್ಪತ್ರೆಯ ಡಾ.ಬಿ.ಎಲ್. ತನೇಜಾ ಸಹಿ ಮಾಡಿರುವ ಮಹಾತ್ಮಾ ಅವರ ರಕ್ತದ ವರದಿ ಓಟಿಸ್ ಸ್ವಾಧೀನದಲ್ಲಿರುವ ಇನ್ನಿತರ ವಸ್ತುಗಳು.

'ನನ್ನ ಪ್ರೀತಿಯ ಡೊರೋತಿ, ನನ್ನ ನಿರಶನ ಸುಸೂತ್ರವಾಗಿ ನಡೆದಿದ್ದಕ್ಕೆ ದೇವರಿಗೆ ಧನ್ಯವಾದ. ನಾನು ನಿಧಾನವಾಗಿ, ಸ್ಥಿರವಾಗಿ ಬಲ ಗಳಿಸುತ್ತಿದ್ದೇನೆ. ಪ್ರೀತಿಯ ಬಾಪು, 1934' ಎಂದು ಗಾಂಧೀಜಿ ಪತ್ರದಲ್ಲಿ ಬರೆಯಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರೈಸ್ ವಾಟರ್‌ಹೌಸ್‍‌ಗೆ ಸೆಬಿ ಶೋಕಾಸ್ ನೋಟೀಸ್
ಬಾಪೂಜಿ ವಸ್ತುಗಳು: ಹರಾಜು ಕಮಿಷನ್ 1.53 ಕೋಟಿ
ಮಹಿಳೆಯರಿಗೆ ಪ್ರವೇಶ: ಸಮಾಧಿಗೆ ಬಾಂಬ್
ಜಿಂಬಾಬ್ವೆ ಪ್ರಧಾನಮಂತ್ರಿ ಕಾರು ಅಫಘಾತ, ಪತ್ನಿ ಸಾವು
ಪೇಶಾವರದಲ್ಲಿ ಆತ್ಮಾಹುತಿ ದಾಳಿ: 7 ಸಾವು
ಸಾಹಸ ಮೆರೆದ ಬಸ್ ಚಾಲಕನಿಗೆ ಲಂಕಾ ಆಹ್ವಾನ