ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪ್ಯಾಲೆಸ್ತೀನ್ ಪ್ರಧಾನಮಂತ್ರಿ ಫಯ್ಯದ್ ರಾಜೀನಾಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ಯಾಲೆಸ್ತೀನ್ ಪ್ರಧಾನಮಂತ್ರಿ ಫಯ್ಯದ್ ರಾಜೀನಾಮೆ
ವೆಸ್ಟ್‌ಬ್ಯಾಂಕ್-ಪ್ಯಾಲೆಸ್ತೀನ್ ಪ್ರಧಾನಮಂತ್ರಿ ಸಲಾಂ ಫಯ್ಯದ್ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಪ್ಯಾಲೆಸ್ತೀನ್ ಸೌಮ್ಯವಾದಿಗಳು ಮತ್ತು ಉಗ್ರಗಾಮಿಗಳ ನಡುವೆ ಅಧಿಕಾರ ಹಂಚಿಕೆಗೆ ದಾರಿ ಸುಸೂತ್ರವಾಗಿದೆ.

ಕಳೆದ 2007ರ ಜೂನ್‌ನಲ್ಲಿ ಪಾಶ್ಚಿಮಾತ್ಯ ಬೆಂಬಲಿತ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್, ಫಯ್ಯಾದ್ ಅವರನ್ನು ನೇಮಕ ಮಾಡಿದ್ದರು. ಅದೇ ವರ್ಷದ ಜೂನ್‌ನಲ್ಲಿ ಇಸ್ಲಾಮಿಕ್ ಉಗ್ರರಾದ ಹಮಸ್ ಗಾಜಾ ಪಟ್ಟಿಯನ್ನು ಹಿಂಸಾಕಾಂಡದ ಮ‌ೂಲಕ ತನ್ನ ವಶಕ್ಕೆ ತೆಗೆದುಕೊಂಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಫಯ್ಯಾದ್ ಅವರನ್ನು ನೇಮಕ ಮಾಡಲಾಗಿತ್ತು.

ಅಬ್ಬಾಸ್ ಮತ್ತು ಫಯ್ಯದ್ ಸರ್ಕಾರ ವೆಸ್ಟ್ ಬ್ಯಾಂಕನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಹಮಸ್ ಗಾಜಾದ ಆಡಳಿತ ಮುಂದುವರೆಸಿತು. ಕೈರೊದಲ್ಲಿ ಮಂಗಳವಾರ ಪ್ಯಾಲೆಸ್ತೀನ್ ಸಂಧಾನ ಮಾತುಕತೆ ಆರಂಭಕ್ಕೆ ಮುನ್ನ, ಫಯ್ಯಾದ್ ಅವರ ಈ ನಿರ್ಧಾರವು ವಿಶ್ವಾಸ ಕುದುರಿಸುವ ಕ್ರಮವಾಗಿದೆ.

ಹಮಸ್ ಮತ್ತು ಅಬ್ಬಾಸ್ ಫಟಾ ಆಂದೋಳನವು ಪರಿವರ್ತನೀಯ ಸರ್ಕಾರವನ್ನು ರಚಿಸಲು ಸಿದ್ಧತೆ ನಡೆಸಿದೆ. ಮಾರ್ಚ್ ಅಂತ್ಯದೊಳಗೆ ಪರಿವರ್ತನೆ ಸರ್ಕಾರ ಸ್ಥಾಪಿಸುವ ಆಶಯವನ್ನು ಅಬ್ಬಾಸ್ ವ್ಯಕ್ತಪಡಿಸಿದ್ದು, ಅಧಿಕಾರ ಹಂಚಿಕೆ ಮಾತುಕತೆ ಗರಿಷ್ಠ ಚಟುವಟಿಕೆಯಿಂದ ಕೂಡಿದೆಯೆಂದು ಹೇಳಿದ್ದಾರೆ. ಫಯ್ಯಾದ್ ರಾಜೀನಾಮೆಯು ರಾಷ್ಟ್ರೀಯ ಏಕತೆಯ ಸರ್ಕಾರ ಸ್ಥಾಪನೆ ಸಲುವಾಗಿ ರಾಷ್ಟ್ರೀಯ ಮಾತುಕತೆಗೆ ಬೆಂಬಲ ನೀಡುವುದೆಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇನ್ನಷ್ಟು ಗಾಂಧಿವಸ್ತುಗಳಿವೆಯಂತೆ ಓಟಿಸ್ ಬಳಿ
ಪ್ರೈಸ್ ವಾಟರ್‌ಹೌಸ್‍‌ಗೆ ಸೆಬಿ ಶೋಕಾಸ್ ನೋಟೀಸ್
ಬಾಪೂಜಿ ವಸ್ತುಗಳು: ಹರಾಜು ಕಮಿಷನ್ 1.53 ಕೋಟಿ
ಮಹಿಳೆಯರಿಗೆ ಪ್ರವೇಶ: ಸಮಾಧಿಗೆ ಬಾಂಬ್
ಜಿಂಬಾಬ್ವೆ ಪ್ರಧಾನಮಂತ್ರಿ ಕಾರು ಅಫಘಾತ, ಪತ್ನಿ ಸಾವು
ಪೇಶಾವರದಲ್ಲಿ ಆತ್ಮಾಹುತಿ ದಾಳಿ: 7 ಸಾವು