ನಾಸಾದ ಗೃಹಬೇಟೆಯಾಡುವ ಬಾಹ್ಯಾಕಾಶ ನೌಕೆ ಕೆಪ್ಲರ್ ಶುಕ್ರವಾರ ರಾತ್ರಿ ಕ್ಷೀರಪಥದ ನಕ್ಷತ್ರಸಮೂಹದಲ್ಲಿ ಇನ್ನಿತರ ಜಗತ್ತಿನ ಜಾಡನ್ನು ಪತ್ತೆಹಚ್ಚಲು ಐತಿಹಾಸಿಕ ಯಾತ್ರೆ ಆರಂಭಿಸಿದೆ.
ಭೂಗ್ರಹ ಬಿಟ್ಟರೆ ಬಾಹ್ಯಾಕಾಶದಲ್ಲಿ ಇನ್ನೊಂದು ಜೀವಿಗಳ ಅಸ್ತಿತ್ವಹೊಂದಿರುವ ಗೃಹವಿರುವುದೇ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಈ ಯಾತ್ರೆ ಹೊರಟಿದೆ.17ನೇ ಶತಮಾನದ ಜರ್ಮನ್ ಖಗೋಳವಿಜ್ಞಾನಿ ಹೆಸರನ್ನು ಹೊಂದಿರುವ ಕೆಪ್ಲರ್ 2049 ಇಡಿಟಿ(0349 ಜಿಎಂಟಿ)ಯಲ್ಲಿ ಅಭೂತಪೂರ್ವ ಯಾತ್ರೆ ಆರಂಭಿಸಿ ಶುಭ್ರ ಆಕಾಶದಲ್ಲಿ ಅಬ್ಬರದೊಂದಿಗೆ ಹೊಕ್ಕಿತು.
ಮೂರುಕಾಲು ವರ್ಷಗಳ ಕೆಪ್ಲರ್ ಯಾತ್ರೆಗೆ 600 ಮಿಲಿಯ ಅಮೆರಿಕ ಡಾಲರ್ ವೆಚ್ಚವಾಗಲಿದೆ. ನಕ್ಷತ್ರವನ್ನು ಸುತ್ತುಹಾಕುವ ಭೂಮಿಯ ಗಾತ್ರದ ಗೃಹಗಳನ್ನು ಪತ್ತೆಹಚ್ಚುವುದು ಈ ಯಾತ್ರೆಯ ಗುರಿಯಾಗಿದ್ದು, ಗೃಹಗಳ ಮೇಲ್ಮೈನಲ್ಲಿ ಜೀವಜಲದ ಸುಳಿವಿಗಾಗಿ ನೌಕೆ ಹುಡುಕಾಟ ನಡೆಸಲಿದೆ. ಜೀವವಿಕಾಸಗೊಂಡಿರುವ ಭೂಮಿಯಂತಹ ಅನೇಕ ಸ್ಥಳಗಳಿರಬಹುದು ಎಂದು ಕೆಪ್ಲರ್ ಮುಖ್ಯವಿಜ್ಞಾನಿ ಬಿಲ್ ಬೊರುಕಿ ತಿಳಿಸಿದ್ದಾರೆ. |