ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 150 ದಂಗೆ ಕೋರರನ್ನು ಗುರುತಿಸಲಾಗಿದೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
150 ದಂಗೆ ಕೋರರನ್ನು ಗುರುತಿಸಲಾಗಿದೆ
ಎರಡು ವಾರಗಳಿಗೆ ಹಿಂದೆ ಬಾಂಗ್ಲಾದೇಶದಲ್ಲಿ ನಡೆದ ಸೈನಿಕರ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖಾ ತಂಡವು 150ಕ್ಕೂ ಅಧಿಕ ಸೈನಿಕರನ್ನು ಗುರುತಿಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಸೈನಿಕರಿಗೆ ಉಗ್ರಗಾಮಿಗಳು ಮತ್ತು ಬಾಂಗ್ಲಾದೇಶೇತರ ಸಂಪರ್ಕಗಳ ಸಾಧ್ಯತೆಯ ಕುರಿತೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬಾಂಗ್ಲಾದೇಶ್ ರೈಫಲ್ಸ್‌‌ ಪಡೆಯು ಸೇನಾಧಿಕಾರಿಗಳ ವಿರುದ್ಧ ನಡೆಸಿದ್ದ ದಂಗೆಯಲ್ಲಿ 73 ಅಧಿಕಾರಿಗಳ ನರಮೇಧ ನಡೆದಿತ್ತು.
ಫೆ.25-26ರಂದು ನಡೆಸಲಾಗಿದ್ದ 33 ಗಂಟೆಗಳ ದಂಗೆಯ ವಿಡಿಯೋ ಚಿತ್ರಣಗಳ ಮೂಲಕ 150 ದಂಗೆಕೋರರನ್ನು ಗುರುತಿಸಲಾಗಿದೆ ಮತ್ತು ಇದುವರೆಗೆ 36 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಂಗೆಯ ವೇಳೆಗೆ ಮಾಧ್ಯಮಗಳು ತೆಗೆದಿರುವ ಫೋಟೋಗಳು ಮತ್ತು ವೀಡಿಯೋ ಚಿತ್ರಗಳನ್ನು ಬಳಸಲಾಗುತ್ತಿದೆ ಎಂದು ಹೇಳಿರುವ ಅಧಿಕಾರಿಗಳು ಬಂಧಿತರ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬುಧವಾರ ಡಿಸ್ಕವರಿ ಉಡಾವಣೆ
ಅಮೆರಿಕ: 40 ಲಕ್ಷ ಉದ್ಯೋಗ ಕಡಿತ
ಲಂಕಾ ಕ್ರಿಕೆಟಿಗರ ಮೇಲೆ ದಾಳಿ: ಲಷ್ಕರ್ ನಿರಾಕರಣೆ
ಗೃಹಬೇಟೆಯಾಡುವ ಬಾಹ್ಯಾಕಾಶ ನೌಕೆ ಗಗನಕ್ಕೆ
ಪ್ಯಾಲೆಸ್ತೀನ್ ಪ್ರಧಾನಮಂತ್ರಿ ಫಯ್ಯದ್ ರಾಜೀನಾಮೆ
ಇನ್ನಷ್ಟು ಗಾಂಧಿವಸ್ತುಗಳಿವೆಯಂತೆ ಓಟಿಸ್ ಬಳಿ