ಪೊಲೀಸರನ್ನು ಗುರಿಯಾಗಿರಿಸಿಕೊಂಡು ಆತ್ಮಾಹುತಿ ಬಾಂಬರ್ ನಡೆಸಿದ ದಾಳಿಯಿಂದಾಗಿ 26 ಮಂದಿ ಸಾವನ್ನಪ್ದಿದ್ದು ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಯಾ ಪಂಗಡದ ಬಾಹುಳ್ಯವಿರುವ ಪಶ್ಚಿಮ ಬಗ್ದಾದಿನಲ್ಲಿ ಪೊಲೀಸ್ ಅಕಾಡೆಮಿಯ ಪ್ರವೇಶ ಪ್ರದೇಶದ ಬಳಿಯಲ್ಲಿ ಈ ದಾಳಿ ನಡೆಸಲಾಗಿದೆ.
ರಾಷ್ಟ್ರದ ಭದ್ರತೆಯನ್ನು ವಹಿಸಿಕೊಳ್ಳಲು ಶಕ್ತರಿದ್ದೇವೆ ಎಂಬ ಸಂದೇಶ ನೀಡಲು ಉಗ್ರಗಾಮಿಗಳು ಇರಾಕಿ ಪಡೆಗಳನ್ನುದ್ದೇಶಿಸಿ ನಡೆಸುತ್ತಿರುವ ದಾಳಿಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಪಡೆಗಳು ಇರಾಕನ್ನು ತ್ಯಜಿಬಲ್ಲವು ಎಂಬುದು ಅವರ ಆಲೋಚನೆಯಾಗಿದೆ ಎನ್ನಲಾಗಿದೆ.
ಇದುವರೆಗೆ ದಾಳಿಯ ಜವಾಬ್ದಾರಿಯನ್ನು ಯಾರೂ ವಹಿಸಿಕೊಳ್ಳಲಿಲ್ಲ. |