ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೌಮ್ಯವಾದಿ ತಾಲಿಬಾನಿಗಳ ಜತೆ ಒಬಾಮಾ ಮಾತುಕತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೌಮ್ಯವಾದಿ ತಾಲಿಬಾನಿಗಳ ಜತೆ ಒಬಾಮಾ ಮಾತುಕತೆ
ಆಫ್ಘಾನಿಸ್ತಾನದ ತಾಲಿಬಾನಿನ ಸೌಮ್ಯವಾದಿ ಶಕ್ತಿಗಳ ಜತೆ ಸಂಧಾನ ಪ್ರಕ್ರಿಯೆ ಭಾಗವಾಗಿ ಮಾತುಕತೆ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸುಳಿವು ನೀಡಿದ್ದಾರೆ. ತಮಗೆ ಸಹಕಾರ ನೀಡುವಂತೆ ಇರಾಕ್‌ನಲ್ಲಿರುವ ಅಮೆರಿಕದ ಪಡೆಗಳು ಅಲ್ ಖೈದಾ ತಂತ್ರಗಳಿಂದ ಪ್ರತ್ಯೇಕಗೊಂಡಿರುವ ಇಸ್ಲಾಮಿಕ್ ಮ‌ೂಲಭೂತವಾದಿಗಳ ಮನವೊಲಿಸಿದ್ದಾಗಿ ಒಬಾಮಾ ತಿಳಿಸಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಜಟಿಲವಾಗಿದ್ದರೂ ಇದೇ ರೀತಿಯ ಅವಕಾಶಗಳಿರಬಹುದು ಎಂದು ಅವರು ಹೇಳಿದರು. ಆಫ್ಘಾನಿಸ್ತಾನದಲ್ಲಿ ಅಮೆರಿಕ ಗೆಲುವಿನ ಹಂತದಲ್ಲಿದೆಯೇ ಎಂಬ ಪ್ರಶ್ನೆಗೆ ಇಲ್ಲವೆಂದು ಒಬಾಮಾ ಉತ್ತರಿಸಿದರು. ಆಫ್ಘಾನಿಸ್ತಾನದಲ್ಲಿ ಸ್ಫೋಟಕ ಪರಿಸ್ಥಿತಿ ಮುಂದುವರಿದಿದ್ದು, ಒಬಾಮಾ 17,000 ಹೆಚ್ಚುವರಿ ಪಡೆಗಳನ್ನು ಅಲ್ಲಿ ನಿಯೋಜಿಸಿದ್ದಾರೆ. ಏತನ್ಮಧ್ಯೆ, ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜಾಯಿ ಕೂಡ ಒಬಾಮಾ ನಿಲುವನ್ನು ಬೆಂಬಲಿಸಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಹಮೀದ್ ಕರ್ಜಾಯಿ ಮಾತನಾಡುತ್ತಾ, ತಾಲಿಬಾನ್ ಸೌಮ್ಯವಾದಿ ಗುಂಪಿನ ಜತೆ ಮಾತುಕತೆಗೆ ಒಬಾಮಾ ಬೆಂಬಲಿಸಿದ್ದು ಒಳ್ಳೆಯ ಸುದ್ದಿ ಎಂದು ವಿಶ್ಲೇಷಿಸಿದರು.
ಆಫ್ಘಾನಿಸ್ತಾನದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಕಡಿವಾಣ ಹಾಕುವ ದಾರಿಯಾಗಿ ಮ‌ೂಲಭೂತವಾಗಿ ಮುಸ್ಲಿಂ ಆಂದೋಳನದ ಜತೆ ಸಂಧಾನದ ಪರಿಕಲ್ಪನೆಗೆ ಚಾಲನೆ ಸಿಕ್ಕಿದೆ ಎಂದು ವರದಿಗಾರರು ಬಣ್ಣಿಸಿದ್ದಾರೆ. ಇರಾಕ್‌ನಲ್ಲಿ ಫಲಪ್ರದ ಕೆಲಸದ ಬಗ್ಗೆ ಹಿನ್ನೋಟ ಹರಿಸಿದ ಒಬಾಮಾ ಮತ್ತು ಸಲಹೆಗಾರರು ಆಫ್ಘಾನಿಸ್ತಾನದಲ್ಲಿ ಅಮೆರಿಕದ ಕಾರ್ಯತಂತ್ರದ ಪರಾಮರ್ಶೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಿಬೆಟ್‌ನಲ್ಲಿ ಚೀನಾ ಸೇನೆ ನಿಯೋಜನೆಗೆ ಖಂಡನೆ
ಬಿಡಿಆರ್ ಹತ್ಯಾಕಾಂಡ ತನಿಖೆಗೆ ಎಫ್‌ಬಿಐ ತಂಡ
ಉಪಗ್ರಹ ತಡೆದರೆ ಯುದ್ಧದಲ್ಲಿ ಪರ್ಯವಸಾನ: ಉತ್ತರಕೊರಿಯ
ಇರಾಕ್: ಆತ್ಮಾಹುತಿ ದಾಳಿ
ವಿಶ್ವ ಮಹಿಳಾ ದಿನಾಚರಣೆಗೆ ಬಾನ್ ಸಂದೇಶ
ಇರಾಕ್: ಆತ್ಮಾಹುತಿ ದಾಳಿಗೆ 26 ಬಲಿ