ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜೆಯುಡಿ ಮುಖ್ಯಸ್ಥನ ಗೃಹಬಂಧನ ವಿಸ್ತರಣೆ ಕೋರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಯುಡಿ ಮುಖ್ಯಸ್ಥನ ಗೃಹಬಂಧನ ವಿಸ್ತರಣೆ ಕೋರಿಕೆ
ಜಮಾತ್ ಉದ್ ದವಾ ಮುಖಂಡ ಹಫೀಝ್ ಮಹ್ಮದ್ ಸಯೀದ್ ಮತ್ತು ಇನ್ನೂ ಐವರ ಗೃಹಬಂಧನ ವಿಸ್ತರಿಸಬೇಕೆಂಬ ಪಾಕಿಸ್ತಾನ ಅಧಿಕಾರಿಗಳ ಕೋರಿಕೆ ಕುರಿತ ನಿರ್ಧಾರವನ್ನು ಲಾಹೋರ್ ಹೈಕೋರ್ಟ್ ಕಾಯ್ದಿರಿಸಿದೆ.

ಮುಂಬೈ ಭಯೋತ್ಪಾದನೆ ದಾಳಿಯಲ್ಲಿ ಜಮಾತ್ ಉದ್ ದವಾದ ನಾಯಕ ಸಯೀದ್ ಕೈವಾಡದ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಯೀದ್ ಮತ್ತು ಇನ್ನೂ ಐವರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ವಿಶ್ವಸಂಸ್ಥೆ ನಿಷೇಧಿಸಿರುವ ಜಮಾತ್ ಉದ್ ದವಾದ ಮುಖಂಡ ಮತ್ತು ಐವರನ್ನು ಲಾಹೋರ್ ಹೈಕೋರ್ಟ್‌ನ ಮ‌ೂವರು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಾಂಗ ಪರಮಾರ್ಶೆ ಮಂಡಳಿಯ ಮುಂದೆ ಹಾಜರುಪಡಿಸಲಾಯಿತು.

ಸಯೀದ್‌ನನ್ನು ಕಳೆದ ಡಿಸೆಂಬರ್ 12ರಂದು ಗೃಹಬಂಧನದಲ್ಲಿ ಇರಿಸಲಾಯಿತು ಮತ್ತು ಇತರೆ ಜೆಯುಡಿ ನಾಯಕರಾದ ಹಾಜಿ ಅಮೀರ್ ಹಮ್ಜಾ, ಕರ್ನಲ್(ನಿವೃತ್ತ) ನಾಜಿರ್ ಅಹ್ಮದ್, ಕಾಜಿ ಕಶೀಫ್ ನಿಯಾಜ್, ಮುಫ್ತಿ ಅಬ್ದುಲ್ ರೆಹ್ಮಾನ್ ಮತ್ತು ಖಾರಿ ಯಾಸಿನ್ ಬಲೋಚ್ ಅವರನ್ನು ಇದೇ ಸಂದರ್ಭದಲ್ಲಿ ಬಂಧಿಸಲಾಗಿತ್ತು.,ಕೆಲವೇ ದಿನಗಳಲ್ಲಿ ಅವರ ಬಂಧನದ ಅವಧಿ ಮುಗಿಯುವ ಹಿನ್ನೆಲೆಯಲ್ಲಿ ಗೃಹಬಂಧನದ ಅವಧಿಯನ್ನು ವಿಸ್ತರಿಸುವಂತೆ ಪಂಜಾಬ್ ಪ್ರಾಂತ್ಯದ ಗೃಹಇಲಾಖೆ ಮನವಿ ಸಲ್ಲಿಸಿದೆ.

ಶಸ್ತ್ರಸಜ್ಜಿತ ವಾಹನಗಳಲ್ಲಿ ಜೆಯುಡಿ ಮುಖಂಡರನ್ನು ಕೋರ್ಟ್‌ಗೆ ಕರೆತರಲಾಯಿತು. ಭದ್ರತಾಸಿಬ್ಬಂದಿ ಸಾಮಾನ್ಯ ಉಡುಪುಗಳಲ್ಲಿ ಕೋರ್ಟ್ ಸುತ್ತ ವರ್ತುಲದ ಬಂದೋಬಸ್ತ್ ಏರ್ಪಡಿಸಿದರು. ಕಟ್ಟಡದ ಸುತ್ತ ಭಾರೀಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೋರ್ಟ್ ಹೊರಗೆ ಸೇರಿದ್ದ ಕೆಲವು ಜೆಯುಡಿ ಕಾರ್ಯಕರ್ತರನ್ನು ಪೊಲೀಸರು ತೆರವು ಮಾಡಿದರೆಂದು ವರದಿಗಳು ಹೇಳಿವೆ.

ಜೆಯುಡಿ ನಾಯಕರ ಬಂಧನಕ್ಕೆ ಯಾವುದೇ ದೃಢ ಕಾರಣಗಳನ್ನು ನೀಡದೇ ಗೃಹಬಂಧನದ ಅವಧಿ ವಿಸ್ತರಿಸಲು ಪಾಕ್ ಅಧಿಕಾರಿಗಳು ಕೋರಿದ್ದಾರೆಂದು ಸಯೀದ್ ಪರ ವಕೀಲ ಜಫರ್ ಇಕ್ಬಾಲ್ ವ್ಯಂಗ್ಯವಾಡಿದರು.ಮುಂಬೈ ದಾಳಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕೋರಿದ 30 ಪ್ರಶ್ನೆಗಳಿಗೆ ಭಾರತವಿನ್ನೂ ಉತ್ತರವನ್ನೇ ನೀಡಿಲ್ಲ ಎಂದು ಇಕ್ಬಾಲ್ ನೆನಪಿಸಿದರು. ಜೆಯುಡಿ ನಾಯಕರ ಬಂಧನಕ್ಕೆ ಯಾವುದೇ ಆಧಾರವಿಲ್ಲ ಎಂದೂ ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್‌ನಲ್ಲಿ ಇನ್ನೊಂದು ಕ್ಷಿಪ್ರಕ್ರಾಂತಿ?
ಸೌಮ್ಯವಾದಿ ತಾಲಿಬಾನಿಗಳ ಜತೆ ಒಬಾಮಾ ಮಾತುಕತೆ
ಟಿಬೆಟ್‌ನಲ್ಲಿ ಚೀನಾ ಸೇನೆ ನಿಯೋಜನೆಗೆ ಖಂಡನೆ
ಬಿಡಿಆರ್ ಹತ್ಯಾಕಾಂಡ ತನಿಖೆಗೆ ಎಫ್‌ಬಿಐ ತಂಡ
ಉಪಗ್ರಹ ತಡೆದರೆ ಯುದ್ಧದಲ್ಲಿ ಪರ್ಯವಸಾನ: ಉತ್ತರಕೊರಿಯ
ಇರಾಕ್: ಆತ್ಮಾಹುತಿ ದಾಳಿ