ಇರಾನ್ ಪರಮಾಣು ಅಸ್ತ್ರಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರುವುದಾಗಿ ಮಿಲಿಟರಿ ಗುಪ್ತಚರ ಇಲಾಖೆಯ ಮುಖ್ಯಸ್ಥ ನಂಬಿದ್ದಾರೆಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ.
ಪರಮಾಣು ಅಸ್ತ್ರಗಳ ನಿರ್ಮಾಣಕ್ಕೆ ತಂತ್ರಜ್ಞಾನದ ಹೊಸ್ತಿಲನ್ನು ಇರಾನ್ ದಾಟಿರುವುದಾಗಿ ಮೇ.ಜನರಲ್ ಅಮೋಸ್ ಯಾಡ್ಲಿನ್ ಇಸ್ರೇಲಿ ಕ್ಯಾಬಿನೆಟ್ಗೆ ತಿಳಿಸಿದ್ದರು. ಇರಾನ್ ಬಾಂಬ್ ಹೊಂದಿದೆಯೆಂದು ಇದರ ಅರ್ಥವಲ್ಲ. ಅದಕ್ಕೆ ಬಾಂಬ್ ತಯಾರಿಸುವ ಕೌಶಲ್ಯ ಮತ್ತು ಬಾಂಬ್ ತಯಾರಿಕೆಗೆ ಅಗತ್ಯವಾದ ಸಾಮಗ್ರಿಗಳು ಇರುವುದೆಂದು ತಮ್ಮ ಮಾತಿನ ಅರ್ಥವೆಂದು ಅವರು ಹೇಳಿದ್ದಾರೆ.
ಅಮೆರಿಕದ ಮಿಲಿಟರಿ ಮುಖ್ಯಸ್ಥರು ಇದೇ ರೀತಿಯ ಅಂದಾಜು ಮಾಡಿರುವ ಬೆನ್ನಹಿಂದೆಯೇ ಯಾಡ್ಲಿನ್ ಪ್ರತಿಕ್ರಿಯೆ ಹೊರಬಿದ್ದಿದೆ. ಯಹೂದಿ ರಾಷ್ಟ್ರಕ್ಕೆ ಅಣ್ವಸ್ತ್ರಶಕ್ತ ಇರಾನ್ ದೊಡ್ಡ ಬೆದರಿಕೆಯೆಂದು ಇಸ್ರೇಲಿ ಅಧಿಕಾರಿಗಳು ಬಹುಹಿಂದೆಯೇ ಗುರುತಿಸಿದ್ದಾರೆ. ಕಳೆದ ವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬಿಲ್ ಕ್ಲಿಂಟನ್ ಭೇಟಿ ನೀಡಿದ್ದಾಗ ಅಧಿಕಾರಿಗಳು ಅವರೊಡನೆ ಇರಾನ್ ಅಣ್ವಸ್ತ್ರ ತಯಾರಿಕೆ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಆದರೆ ಇರಾನ್ ಮಾತ್ರ ತನ್ನ ಪರಮಾಣು ಕಾರ್ಯಕ್ರಮ ಶಾಂತಿಯುತ ಉದ್ದೇಶಕ್ಕೆ ಮಾತ್ರವೆಂದು ಪ್ರತಿಪಾದಿಸುತ್ತಿದೆ. |