ಬಾಸ್ರಾ ಹೊರಗಿರುವ ಬ್ರಿಟನ್ ಮಿಲಿಟರಿ ನೆಲೆ ಮೇಲೆ ರಾಕೆಟ್‌ಗಳು ಅಪ್ಪಳಿಸಿದ್ದರಿಂದ ಒಬ್ಬ ನಾಗರಿಕ ಸತ್ತಿದ್ದಾನೆಂದು ಬ್ರಿಟನ್ ಸಚಿವಾಲಯ ಪ್ರಕಟಿಸಿದೆ. ಮೂರು ತಿಂಗಳ ಅವಧಿಯಲ್ಲಿ ಮಿಲಿಟರಿ ನೆಲೆ ಮೇಲೆ ಇದೇ ಪ್ರಥಮ ದಾಳಿಯಾಗಿದೆ. ಬಲಾಡ್‌ನಲ್ಲಿರುವ ಬೃಹತ್ ಅಮೆರಿಕ ನೆಲೆಯ ಮೇಲೆ ಕೂಡ ರಾಕೆಟ್ ಮತ್ತು ಮೋರ್ಟಾರ್‌ಗಳ ದಾಳಿ ಮಾಡಲಾಗಿದೆ ಎಂದು ಅಮೆರಿಕ ಮಿಲಿಟರಿ ತಿಳಿಸಿದೆ. ಯಾವುದೇ ಹಾನಿ ಮತ್ತು ಸಾವುನೋವಿನ ವರದಿಯಾಗಿಲ್ಲ.
ರಾತ್ರಿ 9 ಗಂಟೆಗೆ ಈ ದಾಳಿ ನಡೆಸಲಾಗಿದ್ದು, ಬ್ರಿಟನ್ನೇತರ ವಿದೇಶಿ ಪ್ರಜೆ ಅಸುನೀಗಿದ್ದಾನೆಂದು ಬ್ರಿಟಿಷ್ ಮಿಲಿಟರಿ ವಕ್ತಾರ ತಿಳಿಸಿದರು. ದುರ್ದೈವಿಯು ಮೂರನೇ ರಾಷ್ಟ್ರದ ಪೌರನಾಗಿದ್ದಾನೆಂದು ಅಮೆರಿಕ ನೇತೃತ್ವದ ಸಮ್ಮಿಶ್ರ ಕೂಟ ತಿಳಿಸಿದೆ.
ಬ್ರಿಟನ್ ಪಡೆಗಳು ತಮ್ಮ ನೆಲೆಯಿಂದ ವಾಪಸಾದ ಬಳಿಕ, ಸುಮಾರು 4000 ಬ್ರಿಟನ್ ಸೈನಿಕರು ಬಾಸ್ರಾ ವಾಯುನೆಲೆಯಲ್ಲಿ ಉಳಿದಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಪಡೆಗಳ ವಾಪಸಾತಿ ಯೋಜನೆ ರೀತ್ಯ ಸೆಪ್ಟೆಂಬರ್‌ನಲ್ಲಿ 12,000 ಅಮೆರಿಕ ಪಡೆಗಳ ಜತೆ ಬಹುತೇಕ ಬ್ರಿಟನ್ ಪಡೆಗಳು ಇರಾಕ್‌ನಿಂದ ವಾಪಸಾಗಲಿವೆ. |