ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 26/11 ದಾಳಿ: ಮೆನನ್, ಹಿಲರಿ ಚರ್ಚೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
26/11 ದಾಳಿ: ಮೆನನ್, ಹಿಲರಿ ಚರ್ಚೆ
ಮುಂಬೈ ಭಯೋತ್ಪಾದನೆ ದಾಳಿಗಳು ಸೇರಿದಂತೆ ಭಯೋತ್ಪಾದನೆ ನಿಗ್ರಹ ಮತ್ತು ಆಫ್ಘಾನಿಸ್ತಾನ, ಶ್ರೀಲಂಕಾದಲ್ಲಿ ಸಂಘರ್ಷ ಮುಂತಾದ ವಿಚಾರಗಳ ಕುರಿತು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಮತ್ತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸೋಮವಾರ ಚರ್ಚಿಸಿದರು.

ಅಮೆರಿಕಕ್ಕೆ ನಾಲ್ಕು ದಿನಗಳ ಭೇಟಿ ನೀಡಿರುವ ಮೆನನ್, ವಿದೇಶಾಂಗ ಇಲಾಖೆಯಲ್ಲಿ ಕ್ಲಿಂಟನ್ ಅವರನ್ನು ಭೇಟಿ ಮಾಡಿ, ಪ್ರಮುಖ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳು ಸೇರಿದಂತೆ ಆಫ್ಘಾನಿಸ್ತಾನದ ಪ್ರಸಕ್ತ ಪರಿಸ್ಥಿತಿ ಕುರಿತು ಚರ್ಚಿಸಿದರು. ಆಫ್ಘಾನಿಸ್ತಾನದಲ್ಲಿ ನಿರಂತರ ಶಾಂತಿ ಸ್ಥಾಪನೆಗೆ ಭಾರತ ಮುಖ್ಯ ಪ್ರಾದೇಶಿಕ ಪಾತ್ರಧಾರಿ ಎಂದು ಒಬಾಮಾ ಆಡಳಿತ ಪರಿಗಣಿಸಿದೆ.

ಅರ್ಧ ಗಂಟೆ ಕಾಲ ನಡೆದ ಭೇಟಿಯಲ್ಲಿ, ಶ್ರೀಲಂಕಾ, ಅಣ್ವಸ್ತ್ರ ಪ್ರಸರಣ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಮುಂಬೈ ಮತ್ತು ಆಫ್ಘಾನಿಸ್ತಾನದ ವಿದ್ಯಮಾನಗಳು ಚರ್ಚಿತವಾಯಿತು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ನಡುವೆ ಪ್ರಸಕ್ತ ಸಂಘರ್ಷ ಹಾಗೂ ಶ್ರೀಲಂಕಾದ ಪ್ರಸಕ್ತ ಮಾನವೀಯತೆ ನೆಲೆಯ ಪರಿಸ್ಥಿತಿಯನ್ನು ಕುರಿತು ಚರ್ಚಿಸಲಾಯಿತೆಂದು ಅವರು ಹೇಳಿದರು.

ಅಧ್ಯಕ್ಷ ಬರಾಕ್ ಒಬಾಮಾ ಜ.20ರಂದು ಅಧಿಕಾರ ವಹಿಸಿಕೊಂಡ ಬಳಿಕ ಇದು ಪ್ರಥಮ ಉನ್ನತಮಟ್ಟದ ಭಾರತ-ಅಮೆರಿಕ ಸಂವಾದವೆಂದು ಹೇಳಲಾಗಿದೆ. ಮೆನನ್ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಮತ್ತು ಉಪವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಸ್ಟೈನ್‌ಬರ್ಗ್ ಅವರನ್ನು ಭೇಟಿ ಮಾಡಿದರು. ವಿದೇಶಾಂಗ ಕಾರ್ಯದರ್ಶಿ ರಿಚರ್ಡ್ ಹಾಲ್‌ಬ್ರೂಕ್ ಮತ್ತು ಅನೇಕ ಮುಖ್ಯ ಸಂಸತ್ ನಾಯಕರನ್ನು ಭೇಟಿ ಮಾಡುವರೆಂದು ನಿರೀಕ್ಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರಕು ಸಾಗಣೆ ಹಡಗುಗಳ ಮುಖಾಮುಖಿ ಡಿಕ್ಕಿ
ಟಿಬೆಟ್ ಸ್ವಾಯತ್ತತೆಗೆ ದಲೈಲಾಮಾ ಒತ್ತಾಯ
150 ಎಲ್‌ಟಿಟಿಇ ಉಗ್ರರು ಹತ, ಹಡಗಿನ ಮೇಲೆ ದಾಳಿ
ಪಾಕ್ ಜನತೆ ಸೇನೆ, ಐಎಸ್ಐಗೆ ಒತ್ತಾಸೆಯಾಗಬೇಕು
ಬ್ರಿಟನ್ ನೆಲೆ ಮೇಲೆ ರಾಕೆಟ್ ದಾಳಿ: ಒಬ್ಬ ಸಾವು
ಜಾಗತಿಕ ಹಸಿವು ನಿವಾರಣೆಗೆ ಸೂಕ್ತ ಕ್ರಮ: ವಿಶ್ವಸಂಸ್ಥೆ