ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮಾನವ ಕ್ಲೋನಿಂಗ್‌ಗೆ ಅವಕಾಶವಿಲ್ಲ: ಒಬಾಮಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾನವ ಕ್ಲೋನಿಂಗ್‌ಗೆ ಅವಕಾಶವಿಲ್ಲ: ಒಬಾಮಾ
ಜೀವಕೋಶದಿಂದ ಮತ್ತಷ್ಟು ಜೀವಕೋಶಗಳನ್ನು ಸೃಷ್ಟಿಸುವ ಸ್ಟೆಮ್‌ಸೆಲ್ ಸಂಶೋಧನೆಗೆ ಆರ್ಥಿಕ ನೆರವು ನೀಡುವುದರ ವಿರುದ್ಧ ಎಂಟು ವರ್ಷಗಳ ನಿಷೇಧವನ್ನು ತೆರವು ಮಾಡಿದ್ದರೂ ಅಮೆರಿಕದಲ್ಲಿ ಮಾನವ ತದ್ರೂಪು ಸೃಷ್ಟಿಗೆ ತಾವು ಅವಕಾಶ ನೀಡುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಮಾನವ ಸಂತಾನಾಭಿವೃದ್ಧಿಗೆ ಕ್ಲೋನಿಂಗ್ ಬಳಸುವುದಕ್ಕೆ ತಮ್ಮ ಸರ್ಕಾರ ಮುಕ್ತ ಬಾಗಿಲು ತೆಗೆಯುವುದಿಲ್ಲ ಎಂದು ಒಬಾಮಾ ಪ್ರತಿಕ್ರಿಯಿಸಿದ್ದಾರೆ. ಸ್ಟೆಮ್‌ಸೆಲ್ ಸಂಶೋಧನೆಗೆ ಆರ್ಥಿಕ ನೆರವು ನಿಷೇಧ ತೆರವು ಮಾಡುವ ಎಕ್ಸಿಕ್ಯೂಟಿವ್ ಆದೇಶಕ್ಕೆ ಸಹಿ ಮಾಡುವುದಕ್ಕೆ ಮುಂಚಿತವಾಗಿ ಒಬಾಮಾ ಮೇಲಿನ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಟೆಮ್‌ಸೆಲ್ ಸಂಶೋಧನೆಗೆ ಕಠಿಣ ನಿರ್ಬಂಧಗಳನ್ನು ಜಾರಿ ಮಾಡುವುದಾಗಿ ಒಬಾಮಾ ಭರವಸೆ ನೀಡುತ್ತಾ, ಪ್ರತಿರೂಪಸೃಷ್ಟಿ ಅಪಾಯಕಾರಿ, ನಮ್ಮ ಸಮಾಜದಲ್ಲಿ ಅಥವಾ ಯಾವುದೇ ಸಮಾಜದಲ್ಲಿ ಇದಕ್ಕೆ ಸ್ಥಾನವಿಲ್ಲ ಎಂದು ನುಡಿದರು.

ನಮ್ಮ ಆಡಳಿತವು ಸ್ಟೆಮ್‌ಸೆಲ್ ಸಂಶೋಧನೆಯನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ ಒಬಾಮಾ, ಅದು ವೈಜ್ಞಾನಿಕವಾಗಿ ಉಪಯುಕ್ತ ಮತ್ತು ಜವಾಬ್ದಾರಿಯಿಂದ ನಡೆಸಿದ್ದೆಂದು ಅರಿವಾದರೆ ಮಾತ್ರ ಸಂಶೋಧನೆಗೆ ಬೆಂಬಲಿಸುವುದಾಗಿ ಹೇಳಿದರು. ನಾವು ಕಠಿಣ ಮಾರ್ಗದರ್ಶಕಗಳನ್ನು ಜಾರಿಗೆ ತರುವುದಲ್ಲದೇ ಸಂಶೋಧನೆಯ ದುರ್ಬಳಕೆಯನ್ನು ಮಾತ್ರ ಸಹಿಸುವುದಿಲ್ಲ ಎಂದು ಅವರು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಷರೀಫ್ ವಿರುದ್ಧ ರಾಜದ್ರೋಹದ ಆರೋಪ: ಪಾಕ್
26/11 ದಾಳಿ: ಮೆನನ್, ಹಿಲರಿ ಚರ್ಚೆ
ಸರಕು ಸಾಗಣೆ ಹಡಗುಗಳ ಮುಖಾಮುಖಿ ಡಿಕ್ಕಿ
ಟಿಬೆಟ್ ಸ್ವಾಯತ್ತತೆಗೆ ದಲೈಲಾಮಾ ಒತ್ತಾಯ
150 ಎಲ್‌ಟಿಟಿಇ ಉಗ್ರರು ಹತ, ಹಡಗಿನ ಮೇಲೆ ದಾಳಿ
ಪಾಕ್ ಜನತೆ ಸೇನೆ, ಐಎಸ್ಐಗೆ ಒತ್ತಾಸೆಯಾಗಬೇಕು