ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪೇಶಾವರದತ್ತ ದೃಷ್ಟಿ ನೆಟ್ಟಿರುವ ತಾಲಿಬಾನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೇಶಾವರದತ್ತ ದೃಷ್ಟಿ ನೆಟ್ಟಿರುವ ತಾಲಿಬಾನ್
ಸ್ವಾತ್ ಕಣಿವೆಯಲ್ಲಿ ತನ್ನ ಅಧಿಕಾರ ಕೇಂದ್ರವನ್ನು ಸ್ಥಾಪಿಸಿರುವ ತಾಲಿಬಾನ್ ಪೇಶಾವರದತ್ತ ದೃಷ್ಟಿ ನೆಟ್ಟಿದೆ. ಅರ್ಬಾಬ್ ಅಲಂಗಿರ್ ಪೇಶಾವರದ ಶ್ರೀಮಂತ ವ್ಯಾಪಾರಿಯಾಗಿದ್ದು, ರಾಜಕೀಯದಲ್ಲಿ ಕೂಡ ಫೆಡರಲ್ ಸಂಪರ್ಕ ಸಚಿವರಾಗಿ ತಮ್ಮ ಹೆಜ್ಜೆಗುರುತನ್ನು ಮ‌ೂಡಿಸಿದ್ದಾರೆ. ಆದರೆ ರಾಜಕೀಯ ಪ್ರಭಾವ ಅವರನ್ನು ಈ ಬಾರಿ ರಕ್ಷಣೆ ಮಾಡುವ ಸಂಭವವಿಲ್ಲ.

ಸ್ವಾತ್ ಕಣಿವೆಯಲ್ಲಿ ವಿಜಯದ ರುಚಿ ಸಿಕ್ಕಿರುವ ತಾಲಿಬಾನ್, ಪೇಶಾವರದ ಬಾಗಿಲು ತಟ್ಟುತ್ತಿದ್ದು, ಅಲಂಗೀರ್, ತನ್ನ ವ್ಯಾಪಾರ ಬಂದ್ ಮಾಡಿ ಹುಟ್ಟೂರಿನಿಂದ ಹೊರಡಲು ಸಿದ್ಧತೆ ನಡೆಸಿದ್ದಾರೆ. ಜಮ‌‌್ರೂದ್ ರಸ್ತೆಯಲ್ಲಿರುವ ಮಹಿಳೆಯರ ಉಡುಪಿನ ಅಂಗಡಿಗಳನ್ನು ಮುಚ್ಚುವಂತೆ ಮಂಗಲ್‌ಭಾಗ್‌ನ ಲಷ್ಕರೆ ಇಸ್ಲಾಂನಿಂದ ಪತ್ರಗಳು ಮತ್ತು ದೂರವಾಣಿ ಕರೆಗಳು ತಮಗೆ ಬರುತ್ತಿವೆಯೆಂದು ಅಲಂಗೀರ್ ತಿಳಿಸಿದ್ದಾರೆ.

ಸ್ವಾತ್‌ನಲ್ಲಿ ವಿಜಯ ದುಂದುಭಿ ಮೊಳಗಿಸಿ ಅದರ ರುಚಿ ಹಿಡಿದಿರುವ ತಾಲಿಬಾನ್, ಪಾಕಿಸ್ತಾನದ ಸರ್ಕಾರ ತನ್ನೆದರು ಮಂಡಿಯ‌ೂರಿ ಶರಿಯತ್ ಕಾನೂನು ಜಾರಿಗೆ ಸಮ್ಮತಿಸುವ ಹಾಗೆ ಮಾಡಿದ್ದು, ಪೇಶಾವರದತ್ತ ಅದು ಕಣ್ಣುನೆಟ್ಟಿದೆ. ಪೇಶಾವರ ಪತನಗೊಂಡರೆ, ಪಾಕಿಸ್ತಾನದ ಅಧಿಕಾರ ಕೇಂದ್ರಗಳಾದ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿ ಮೇಲೆ ಹತ್ತಿರದಿಂದ ದಾಳಿಗೆ ತಾಲಿಬಾನ್‌ಗೆ ಅವಕಾಶ ಒದಗಿಸುತ್ತದೆ.

ಅಲಂಗೀರ್ ಮತ್ತು ಇನ್ನೂ ಅನೇಕ ಮಂದಿ ಉಗ್ರಗಾಮಿಗಳ ಕಾಯಂ ಬೆದರಿಕೆಗೆ ಗುರಿಯಾಗಿದ್ದಾರೆ. ಹಗಲಿನಲ್ಲಿ ಸಹ ನಮ್ಮ ಮಹಿಳೆಯರನ್ನು ಮತ್ತು ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿಸುವುದು ಸಾಧ್ಯವಿಲ್ಲ ಎಂದು ಪೇಶಾವರದ ಹಯತಾಬಾದ್ ನಿವಾಸಿ ಅಲಿ ಅಕ್ಬರ್ ತಿಳಿಸಿದರು. ಪೊಲೀಸರು ಮತ್ತು ಅರೆಮಿಲಿಟರಿ ಪಡೆಗಳು ಆಗಾಗ್ಗೆ ದಾಳಿಗೆ ಗುರಿಯಾಗುತ್ತಿದ್ದು, ಪೌರರಿಗೆ ಶಸ್ತ್ರಾಸ್ತ್ರ ನೀಡುವುದಕ್ಕೆ ಪ್ರಾಂತೀಯಸರ್ಕಾರ ಪರಿಶೀಲನೆ ನಡೆಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇರಾನ್‌ ಜತೆ ಕೊಳವೆ ಮಾರ್ಗ : ಪಾಕ್‌ ಸಿದ್ಧ
ಲಂಕಾ: ಆತ್ಮಾಹುತಿ ದಾಳಿ
ಮಾನವ ಕ್ಲೋನಿಂಗ್‌ಗೆ ಅವಕಾಶವಿಲ್ಲ: ಒಬಾಮಾ
ಷರೀಫ್ ವಿರುದ್ಧ ರಾಜದ್ರೋಹದ ಆರೋಪ: ಪಾಕ್
26/11 ದಾಳಿ: ಮೆನನ್, ಹಿಲರಿ ಚರ್ಚೆ
ಸರಕು ಸಾಗಣೆ ಹಡಗುಗಳ ಮುಖಾಮುಖಿ ಡಿಕ್ಕಿ