ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಮತ್ತು ಸೋದರ ಶಾಬಾಜ್ ಅವರನ್ನು ಸರ್ಕಾರ ಗೃಹಬಂಧನಕ್ಕೆ ಒಳಪಡಿಸಲು ಕೆಲವೇ ಸಮಯ ಬಾಕಿವುಳಿದಿದೆಯೆಂಬ ವರದಿಗಳ ನಡುವೆ, ಪಾಕಿಸ್ತಾನ ಬಿಕ್ಕಟ್ಟಿನ ಅಂಚಿನಲ್ಲಿ ಸಿಲುಕಿದೆ. ಸ್ವದೇಶದಲ್ಲಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದುಬೈನಲ್ಲೇ ಉಳಿಯುವಂತೆ ಅಧ್ಯಕ್ಷ ಜರ್ದಾರಿ ಅವರಿಗೆ ಸೂಚಿಸಲಾಗಿದೆಯೆಂದು ಮಾಧ್ಯಮದ ವರದಿಗಳು ತಿಳಿಸಿದ್ದರೂ ಸರ್ಕಾರ ಈ ವರದಿಗಳನ್ನು ನಿರಾಕರಿಸಿದೆ. ಅಧ್ಯಕ್ಷರು ಪ್ರಸಕ್ತ 2 ದಿನಗಳ ಭೇಟಿ ಸಲುವಾಗಿ ಟೆಹ್ರಾನ್ನಲ್ಲಿದ್ದು, ಪಾಕಿಸ್ತಾನಕ್ಕೆ ಹಿಂತಿರುಗುವ ಬದಲಿಗೆ ದುಬೈಗೆ ಮುಂದಿನ ಪ್ರಯಾಣ ಕೈಗೊಳ್ಳಲು ಸೂಚಿಸಲಾಗಿದೆಯೆಂದು ವರದಿಗಳು ಹೇಳಿವೆ. ಪಾಕ್ ಸೇನಾ ಮುಖ್ಯಸ್ಥರು ಪ್ರಸಕ್ತ ಪ್ರಧಾನಮಂತ್ರಿಯನ್ನು ಭೇಟಿ ಮಾಡಲಿದ್ದಾರೆಂದೂ ತಿಳಿದುಬಂದಿದೆ. ನವಾಜ್ ಷರೀಫ್ ಪಿಎಂಎಲ್-ಎನ್ ನಾಯಕರ ವಿರುದ್ಧ ಸರ್ಕಾರ ದಾಳಿ ಮುಂದುವರಿಸಿದಂತೆ, ಷರೀಫ್ ಸರ್ಕಾರವನ್ನು ಧಿಕ್ಕರಿಸಿ, ಅಬೋಟಾಬಾದ್ನಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ವಕೀಲರು ಮತ್ತು ಪ್ರತಿಪಕ್ಷದ ನಾಯಕರು ಯೋಜಿಸಿರುವ ರ್ಯಾಲಿಗೆ ಮುನ್ನ, ಜರ್ದಾರಿ ಮತ್ತು ಷರೀಫ್ ನಡುವೆ ಮುಖಾಮುಖಿ ಕಾಳಗ ನಡೆದಿದೆ. ಮಾಜಿ ಅಧ್ಯಕ್ಷ ಮುಷರಫ್ ವಜಾಮಾಡಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಚೌಧರಿ ಮತ್ತಿತರರನ್ನು ಮರುನೇಮಕ ಮಾಡುವಂತೆ ಷರೀಫ್ ಒತ್ತಾಯಿಸುತ್ತಿದ್ದಾರೆ. ಇಫ್ತಿಕರ್ ಮರುನೇಮಕವಾದರೆ ತಮ್ಮ ವಿರುದ್ಧ ಆರೋಪಗಳಿಗೆ ಮರುಜೀವ ನೀಡಬಹುದೆಂಬ ಶಂಕೆಯ ಮೇಲೆ ಜರ್ದಾರಿ ಇದಕ್ಕೆ ವಿರೋಧಿಸುತ್ತಿದ್ದಾರೆ. |