ಕ್ಯಾನ್ಸರ್ಪೀಡಿತ ಬ್ರಿಟನ್ ರಿಯಾಲಿಟಿ ಟಿವಿ ಸ್ಟಾರ್ ಜೇಡ್ ಗೂಡಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ವೈದ್ಯರು ಆಕೆ ಮುಂಚಿತವಾಗಿ ಸಾಯುವುದನ್ನು ನಿರೀಕ್ಷಿಸಿದ್ದಾರೆ. ಮಾಜಿ ಬಿಗ್ ಬ್ರದರ್ ಸ್ಟಾರ್ ತನ್ನ ಐದು ವರ್ಷ ವಯಸ್ಸಿನ ಬಾಬ್ಬಿ ಮತ್ತು ನಾಲ್ಕರ ಪ್ರಾಯದ ಫ್ರೆಡ್ಡಿಯನ್ನು ಕಾಣಲು ಅಸಾಧ್ಯವಾದ್ದರಿಂದ ತೀವ್ರ ದಿಗಿಲಾಗಿದೆ.
ಆಸ್ಪತ್ರೆ ಹಾಸಿಗೆ ಮೇಲೆ ಸಾಯಲು ಇಚ್ಛಿಸದ ಅವರು ಮನೆಗೆ ಹಿಂತಿರುಗಲು ಬಯಸಿದ್ದಾರೆಂದು ವರದಿಯಾಗಿದೆ. ಗೂಡಿ ಮನೆಗೆ ಹೋಗಿ ಕುಟುಂಬ ಮತ್ತು ಸ್ನೇಹಿತರ ಜತೆ ತನ್ನ ಕಡೆಯದಿನಗಳನ್ನು ಕಳೆಯಲು ಇಚ್ಛಿಸಿದ್ದಾರೆ. ಆಕೆ ಮನೆಯಲ್ಲಿ ನೋವನ್ನು ಸಹಿಸಿಕೊಳ್ಳುವಂತಾಗಲು ಶುಶ್ರೂಷಕಿಯರನ್ನು ಸಿದ್ಧಪಡಿಸಲಾಗುತ್ತಿದೆ. 27ರ ಪ್ರಾಯದ ಟಿವಿ ಸ್ಟಾರ್ ಸರ್ವಿಕಲ್ ಕ್ಯಾನ್ಸರ್ನಿಂದ ನರಳುತ್ತಿದ್ದು, ದೇಹಾದ್ಯಂತ ಕ್ಯಾನ್ಸರ್ ಕಣಗಳು ಹರಡಿದೆ.
ಸಾವಿನ ಬಳಿಕವೂ ದೇವರ ಮೂಲಕ ಸಂಪರ್ಕ ಹೊಂದುವ ಸಲುವಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ಗೂಡಿ ಹಾಸಿಗೆಯಲ್ಲೇ ಕ್ರೈಸ್ತ ಧಾರ್ಮಿಕ ಕ್ರಿಯಾವಿಧಿಗೆ ಒಳಪಟ್ಟಿದ್ದರು.
|