ಅಮೆರಿಕದಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಶೂಟಿಂಗ್ ಮಾಡಿ 10 ಜನರನ್ನು ಕಗ್ಗೊಲೆ ಮಾಡಿದ ಘಟನೆಯ ಬೆನ್ನಹಿಂದೆಯೇ, ಕಪ್ಪು ಉಡುಪು ಧರಿಸಿದ್ದ 17ರ ಪ್ರಾಯದ ಬಂದೂಕುಧಾರಿಯೊಬ್ಬ ನೈರುತ್ಯ ಜರ್ಮನಿಯಲ್ಲಿರುವ ತಾನು ಓದಿದ ಪ್ರೌಢೆಶಾಲೆಯಲ್ಲಿ ಎಡಬಿಡದೇ ಗುಂಡುಹಾರಿಸಿ, ರಕ್ತದೋಕುಳಿ ಹರಿಸಿದ್ದರಿಂದ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ.
ಶಾಲೆಯಲ್ಲಿ 9 ವಿದ್ಯಾರ್ಥಿಗಳು ದುಷ್ಕರ್ಮಿಯ ಗುಂಡಿಗೆ ಬಲಿಯಾದರೆ, ಕಟ್ಟಡದ ಹೊರಗೆ ವ್ಯಕ್ತಿಯೊಬ್ಬನಿಗೆ ಗುಂಡಿಕ್ಕಿದ ಬಳಿ ದುಷ್ಕರ್ಮಿ ಪರಾರಿಯಾದ. ಶಾಲೆಗೆ ಬಂದೂಕುನೊಂದಿಗೆ ಆಗಮಿಸಿದ ಅವನು ರಕ್ತಪಾತವನ್ನೇ ಹರಿಸಿದ ಎಂದು ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ಎರ್ವಿನ್ ಹೆಟ್ಗೆರ್ ತಿಳಿಸಿದರು. ತಾವು ಜೀವನದಲ್ಲಿ ಇಂತಹ ಭಯಾನಕ ದೃಶ್ಯವನ್ನು ಕಂಡೇ ಇಲ್ಲ ಎಂದು ಅವರು ಉದ್ಗರಿಸಿದ್ದಾರೆ.
ಗುಂಡಿನದಾಳಿ ಬಳಿಕ ಆಲ್ಬರ್ಟ್ವಿಲ್ಲೆ ಶಾಲೆಯಿಂದ ಪರಾರಿಯಾದ ಆರೋಪಿ, ವಿನ್ನೆಡೆನ್ ಪಟ್ಟಣದ ಕೇಂದ್ರಭಾಗಕ್ಕೆ ತಪ್ಪಿಸಿಕೊಂಡ. ಕಳೆದ ವರ್ಷ ಈ ಶಾಲೆಯಿಂದ ಪದವಿ ಪಡೆದಿದ್ದ ಆರೋಪಿಗಾಗಿ ಹುಡುಕಾಡಿದ ಪೊಲೀಸರು ಕಾರಿನಲ್ಲಿ ಯಾರನ್ನೂ ಹತ್ತಿಸಿಕೊಳ್ಳದಂತೆ ನಿವಾಸಿಗಳಿಗೆ ಸೂಚಿಸಿದರು.
|