ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕೂಡಲೇ ಹಿಂತಿರುಗದಂತೆ ಜರ್ದಾರಿಗೆ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೂಡಲೇ ಹಿಂತಿರುಗದಂತೆ ಜರ್ದಾರಿಗೆ ಆದೇಶ
ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ಕಚ್ಚಾಟ ತಾರಕಕ್ಕೇರಿರುವ ನಡುವೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಖ್ ಪರ್ವೇಜ್ ಕಯಾನಿ ಬುಧವಾರ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಮತ್ತು ಭದ್ರತಾಸ್ಥಿತಿಗತಿ ಕುರಿತು ಚರ್ಚಿಸಿದರು. ಏತನ್ಮಧ್ಯೆ, ಇರಾನ್‌ಗೆ ಭೇಟಿ ನೀಡಿರುವ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರಿಗೆ ವಾಪಸು ಪಾಕಿಸ್ತಾನಕ್ಕೆ ಹಿಂತಿರುಗದಂತೆ ಸೂಚನೆ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಟೆಹ್ರಾನ್‌ನಲ್ಲಿ ಆರ್ಥಿಕ ಸಹಕಾರ ಒಕ್ಕೂಟದ ಶೃಂಗಸಭೆಯಲ್ಲಿ ಭಾಗವಹಿಸಿಲು ಜರ್ದಾರಿ ರಾಷ್ಟ್ರದ ಹೊರಗಿದ್ದಾಗಲೇ ಉಭಯ ನಾಯಕರು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ.

2007ರಲ್ಲಿ ವಜಾಗೊಳಿಸಲಾದ ನ್ಯಾಯಾಧೀಶರ ಮರುಸ್ಥಾಪನೆ ಮತ್ತು ಇತರ ಕೆಲವು ಬೇಡಿಕೆಗಳೊಂದಿಗೆ ದೇಶಾದ್ಯಂತ ರ‌್ಯಾಲಿ ಮತ್ತು ಪ್ರತಿಭಟನೆ ನಡೆಸುವ ಮಾಜಿ ಪ್ರಧಾನಿ ನವಾಜ್ ಶರೀಫ್ ನೇತೃತ್ವದ ಪಿಎಂಎಲ್ ಹಾಗೂ ವಕೀಲರ ಪ್ರಯತ್ನಗಳಿಗೆ ಸರಕಾರ ಈಗಾಗಲೇ ಕಡಿವಾಣ ಒಡ್ಡುತ್ತಿದೆ. ಸರಕಾರದ ಆದೇಶ ಉಲ್ಲಂಘಿಸಿ ಶರೀಫ್ ಅವರು ಗುರುವಾರ ಅಬ್ಬೊತಾಬಾದ್‌ನಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ್ದಾರೆ.

ರಾಷ್ಟ್ರವು ಈಗ ಬಿಕ್ಕಟ್ಟಿನಲ್ಲಿ ಸಿಲುಕಿದ್ದು ಅದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶರೀಫ್ ಘೋಷಿಸಿದ್ದಾರೆ.

ಮಾನವಹಕ್ಕು ಹೋರಾಟಗಾರರು, ವಕೀಲರು ಮತ್ತು ಪ್ರತಿಪಕ್ಷದ ಕಾರ್ಯಕರ್ತರ ವಿರುದ್ಧ ಈಗಾಗಲೇ ಪಾಕಿಸ್ತಾನ ಅಧಿಕಾರಿಗಳು ಇಸ್ಲಾಮಾಬಾದ್ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ದಾಳಿ ಮಾಡಿ, ನೂರಾರು ಜನರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ.

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ವಜಾ ಮಾಡಿದ ನ್ಯಾಯಾಧೀಶರ ಮರುನೇಮಕಕ್ಕೆ ಒತ್ತಡ ಹೇರಲು ವಕೀಲರು ಸುದೀರ್ಘ ಪ್ರತಿಭಟನೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಂಧನ ಕೈಗೊಳ್ಳಲಾಗಿದೆ.

ಇಂತಹ ರಾಜಕೀಯ ಅಸ್ಥಿರತೆಯ ಪರಿಸ್ಥಿತಿಯಲ್ಲಿ, ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಮಿಲಿಟರಿಯು ಯಾವುದೇ ಸಮಯದಲ್ಲಿ ಹಸ್ತಕ್ಷೇಪ ನಡೆಸುವ ಸಾಧ್ಯತೆಗಳಿವೆ ಎಂದು ಈಗಾಗಲೇ ಪಾಕ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿಂದೆಯೂ ಹಲವಾರು ಬಾರಿ ರಾಜಕೀಯ ಅಸ್ಥಿರತೆ ಸಂದರ್ಭ ಮಿಲಿಟರಿ ಮುಖ್ಯಸ್ಥರು ದಂಗೆಯೆದ್ದು ಮಿಲಿಟರಿ ಆಡಳಿತ ಸ್ಥಾಪಿಸಿದ್ದ ಉದಾಹರಣೆಗಳು ನಮ್ಮ ಮುಂದಿವೆ.

ಈ ಮಧ್ಯೆ, ಹೋರಾಟಗಾರರ ಮೇಲೆ ಸರಕಾರ ಬಿಗು ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ. ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಅವರು, ಬಂಧನ ತಪ್ಪಿಸಿಕೊಳ್ಳಲು ಮತ್ತೊಮ್ಮೆ ತಲೆ ಮರೆಸಿಕೊಂಡಿದ್ದಾರೆ. ರಾತೋರಾತ್ರಿ ಇಮ್ರಾನ್ ಮನೆಗೆ ದಾಳಿ ಮಾಡಲಾಯಿತಾದರೂ, ಅವರು ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜರ್ಮನಿಯಲ್ಲಿ ಶೂಟಿಂಗ್‌ ಘಟನೆಗೆ 10 ಬಲಿ
ಅಂತಿಮ ದಿನಗಳನ್ನು ಎಣಿಸುತ್ತಿರುವ ಗೂಡಿ
'ರಾಜದ್ರೋಹಿ' ನವಾಜ್ ಷರೀಫ್ ಬಂಧನ ಸಾಧ್ಯತೆ
ಟಿಬೆಟ್ ಭೂಲೋಕದ ಸ್ವರ್ಗ: ಚೀನಾ ಘೋಷಣೆ
ಬಂದೂಕುಧಾರಿಯ ಶೂಟಿಂಗ್ ದಾಂಧಲೆಗೆ 10 ಬಲಿ
ಆಫ್ಘನ್ ಮತ್ತೆ ತಾಲಿಬಾನ್ ವಶವಾಗಕೂಡದು